ADVERTISEMENT

ಉಡುಪಿ: ಕೋವಿಡ್‌ಗೆ ಇಬ್ಬರು ಸಾವು, 568 ಮಂದಿಗೆ ಸೋಂಕು ದೃಢ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2021, 15:44 IST
Last Updated 29 ಏಪ್ರಿಲ್ 2021, 15:44 IST

ಉಡುಪಿ: ಜಿಲ್ಲೆಯಲ್ಲಿ ಗುರುವಾರ ಇಬ್ಬರು ಸೋಂಕಿತರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಕುಂದಾಪುರ ತಾಲ್ಲೂಕಿನ 76 ವರ್ಷದ ವೃದ್ಧೆ ಹಾಗೂ ಕಾರ್ಕಳ ತಾಲ್ಲೂಕಿನ 62 ವರ್ಷದ ವ್ಯಕ್ತಿ ಮೃತಪಟ್ಟವರು.

ಗಂಬೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಇಬ್ಬರಿಗೂ ಈಚೆಗೆ ಕೋವಿಡ್‌ ತಗುಲಿತ್ತು. ಜಿಲ್ಲೆಯಲ್ಲಿ ಇದುವರೆಗೂ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 196ಕ್ಕೆ ಏರಿಕೆಯಾಗಿದೆ.

568 ಸೋಂಕಿತರು: ಜಿಲ್ಲೆಯಲ್ಲಿ ಸೋಂಕು ಏರುಗತಿಯಲ್ಲಿ ಸಾಗಿದ್ದು, ಗುರುವಾರ 568 ಮಂದಿಗೆ ಕೋವಿಡ್‌ ದೃಢಪಟ್ಟಿದೆ. ಉಡುಪಿಯ 312, ಕುಂದಾಪುರದ 175, ಕಾರ್ಕಳದ 78 ಹಾಗೂ ಬೇರೆ ಜಿಲ್ಲೆಗಳ ಮೂವರಿಗೆ ಸೋಂಕು ತಗುಲಿದೆ. ಸೋಂಕಿತರಲ್ಲಿ 260 ಮಹಿಳೆಯರು, 308 ಪುರುಷರು ಇದ್ದಾರೆ.

ADVERTISEMENT

364 ಮಂದಿಯಲ್ಲಿ ಸೋಂಕಿನ ಲಕ್ಷಣಗಳಿದ್ದರೆ, 204 ಜನರಲ್ಲಿ ಲಕ್ಷಣಗಳು ಕಾಣಿಸಿಕೊಂಡಿಲ್ಲ. 28 ಸೋಂಕಿತರು ಕೋವಿಡ್‌ ಆಸ್ಪತ್ರೆಗಳಲ್ಲಿ ಹಾಗೂ 540 ಮಂದಿ ಹೋಂ ಐಸೊಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋವಿಡ್ ಲಸಿಕಾ ಅಭಿಯಾನ ಮುಂದುವರಿದಿದ್ದು, 45 ವರ್ಷ ಮೇಲ್ಪಟ್ಟ 1,60,030 ಮಂದಿ ಮೊದಲ ಡೋಸ್‌ ಲಸಿಕೆ ಹಾಕಿಸಿಕೊಂಡಿದ್ದು, 28,239 ಮಂದಿ ಎರಡನೇ ಡೋಸ್‌ ಪಡೆದಿದ್ದಾರೆ. 22497 ಆರೋಗ್ಯ ಕಾರ್ಯಕರ್ತರು ಮೊದಲ ಡೋಸ್‌, 17,724 ಎರಡನೇ ಡೋಸ್ ಪಡೆದಿದ್ದರೆ, 4411 ಫ್ರಂಟ್‌ಲೈನ್ ಕಾರ್ಯಕರ್ತರು ಮೊದಲ ಡೋಸ್‌, 2944 ಮಂದಿ ಎರಡನೇ ಡೋಸ್‌ ತೆಗೆದುಕೊಂಡಿದ್ದಾರೆ.

ಇದುವರೆಗೂ 1,86,938 ಮೊದಲ ಡೋಸ್‌ ಹಾಗೂ 48907 ಮಂದಿ ಎರಡನೇ ಡೋಸ್‌ ಕೋವಿಡ್‌ ಲಸಿಕೆ ಹಾಕಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.