ADVERTISEMENT

60 ವರ್ಷ ಮೇಲ್ಪಟ್ಟ 385 ಮಂದಿಗೆ ಕೋವಿಡ್‌ ಲಸಿಕೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2021, 15:39 IST
Last Updated 2 ಮಾರ್ಚ್ 2021, 15:39 IST

ಉಡುಪಿ: ಜಿಲ್ಲೆಯಾದ್ಯಂತ ಮೂರನೇ ಹಂತದ ಕೋವಿಡ್ ಲಸಿಕಾ ಅಭಿಯಾನ ಆರಂಭವಾಗಿದ್ದು ಮಂಗಳವಾರ 60 ವರ್ಷ ಮೇಲ್ಪಟ್ಟ 326 ಮಂದಿ ಲಸಿಕೆ ಪಡೆದಿದ್ದಾರೆ.

ಲಸಿಕೆ ಪಡೆಯಲು ಹಿರಿಯರು ಹೆಚ್ಚು ಉತ್ಸಾಹ ತೋರುತ್ತಿರುವುದು ಕಂಡುಬಂದಿದ್ದು, ಸೋಮವಾರ 59 ಹಾಗೂ ಮಂಗಳವಾರ 326 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. 45 ರಿಂದ 59 ವರ್ಷದೊಳಗಿನ 7 ಮಂದಿ ಇದುವರೆಗೂ ಲಸಿಕೆ ಹಾಕಿಸಿಕೊಂಡಿದ್ದಾರೆ.

ಮೊದಲ ಹಂತದಲ್ಲಿ ಇದುವರೆಗೂ 17697 ಮಂದಿ ಲಸಿಕೆ ಪಡೆದಿದ್ದು, ಶೇ 74ರಷ್ಟು ಗುರಿ ಸಾಧನೆಯಾಗಿದೆ. 9,070 ಮಂದಿಗೆ ಎರಡನೇ ಡೋಸ್‌ ನೀಡಲಾಗಿದ್ದು, ಶೇ 38ರಷ್ಟು ಪ್ರಗತಿಯಾಗಿದೆ. 3,138 ಫ್ರಂಟ್‌ಲೈನ್ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದ್ದು, ಶೇ 73ರಷ್ಟು ಸಾಧನೆಯಾಗಿದೆ.

ADVERTISEMENT

6 ಮಂದಿಗೆ ಕೋವಿಡ್‌:

ಮಂಗಳವಾರ 6 ಮಂದಿಗೆ ಕೋವಿಡ್‌ ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ23,621ಕ್ಕೆ ಏರಿಕೆಯಾಗಿದೆ. 63 ಸಕ್ರಿಯ ಸೋಂಕಿತರು ಇದ್ದು, 23,368 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 190 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.