ADVERTISEMENT

ದನ ಕಳವು ಪ್ರಕರಣ: ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 14 ಜುಲೈ 2025, 6:16 IST
Last Updated 14 ಜುಲೈ 2025, 6:16 IST
ಮೊಹಮ್ಮದ ಕೈಫ್‌ ಸಾಸ್ತಾನ
ಮೊಹಮ್ಮದ ಕೈಫ್‌ ಸಾಸ್ತಾನ   

ಬೈಂದೂರು: ಇಲ್ಲಿನ ಬೈಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಗಾಗ್ಗೆ ನಡೆಯುತ್ತಿದ್ದ ದನ ಕಳವು ಪ್ರಕರಣಗಳ ಆರೋಪಿಗಳ ಪತ್ತೆ ಸಂಬಂಧ ರಚಿಸಿದ್ದ ತಂಡಗಳು ಇಬ್ಬರು ಆರೋಪಿಗಳನ್ನು ಬಂಧಿಸಿ, ಜಾನುವಾರ ಸಾಗಾಟಕ್ಕೆ ಬಳಸಿದ್ದ ವಾಹನಗಳನ್ನು ವಶಪಡಿಸಿಕೊಂಡಿದೆ.

ಮೊಹಮ್ಮದ ಕೈಫ್‌ ಸಾಸ್ತಾನ, ಮೊಹಮ್ಮದ್ ಸುಹೇಲ್ ಖಾದರ್ ಉಚ್ಚಿಲ ಎಂಬುವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಜಾನುವಾರುಗಳನ್ನು ಕಳವು ಮಾಡಿ ಸಾಗಾಟ ಮಾಡಿದ ಕಾರುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಕಾರಿನಲ್ಲಿ ಸಾಗಾಟ ಮಾಡಿದ 4 ದನಗಳನ್ನು ರಕ್ಷಿಸಿ ಗೋಶಾಲೆಗೆ ಬಿಡಲಾಗಿದೆ.

ADVERTISEMENT

ತಿಮ್ಮೇಶ್ ಬಿ.ಎನ್. ಅವರು ಕಾರ್ಯಾಚರಣೆ ತಂಡದ ನೇತೃತ್ವ ವಹಿಸಿದ್ದರು. ಪಿಎಸ್‌ಐಗಳಾದ ನವೀನ ಬೋರಕರ, ವಿನಯ, ಬಸವರಾಜ್, ಸಿಬ್ಬಂದಿ ನಾಗೇಂದ್ರ, ಮೋಹನ, ಸುರೇಶ್, ಚೇತನ್, ಜಯರಾಮ, ಸತೀಶ್, ಚಿದಾನಂದ, ಮಾಳಪ್ಪ ದೇಸಾಯಿ, ಶ್ರೀಧರ ಪಾಟೀಲ್, ಪರಯ್ಯ ಮಠಪತಿ ಭಾಗವಹಿಸಿದ್ದರು.

ಮೊಹಮ್ಮದ್ ಸುಹೇಲ್ ಖಾದರ್ ಉಚ್ಚಿಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.