ಕುಂದಾಪುರ: ಮೂಡ್ಲಕಟ್ಟೆಯ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯ ಕಮ್ಯುನಿಟಿ ಸರ್ವಿಸ್ ಕ್ಲಬ್ ಮತ್ತು ಎಫ್‌ಎಸ್‌ಎಲ್ ಇಂಡಿಯ ಸಂಸ್ಥೆಯ ಸಹಯೋಗದಲ್ಲಿ ಪ್ರಥಮ ವರ್ಷದ ಬಿ.ಕಾಂ ವಿದ್ಯಾರ್ಥಿಗಳಿಗೆ ಸಂಸ್ಕೃತಿ ವಿನಿಮಯ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಫ್ರಾನ್ಸ್ ವಿದ್ಯಾರ್ಥಿಗಳು ವರ್ಕ್ ಕ್ಯಾಂಪ್ ಪ್ರೆಸೆಂಟೇಷನ್, ಗುಂಪು ಚರ್ಚೆ, ಗ್ರೂಪ್ ಬಾಂಡಿಂಗ್ ಚಟುವಟಿಕೆಯನ್ನು ಐಎಂಜೆ ಪದವಿ ವಿದ್ಯಾರ್ಥಿಗಳೊಂದಿಗೆ ನಡೆಸಿದರು.
ಪರಿಸರ ಸಂರಕ್ಷಿಸುವ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ‘ವಾಯ್ಸ್ ಫೋರ್ ಚೇಂಜ್ - ಲೋಕಲ್ ಆ್ಯಕ್ಷನ್’ ಕುರಿತು ನಡೆದ ಕಾರ್ಯಕ್ರಮದಲ್ಲಿ ಅರಣ್ಯ ನಾಶ ಮತ್ತು ಪರಿಸರ ಸಂರಕ್ಷಣೆಯ ಕುರಿತು ಚರ್ಚಿಸಲಾಯಿತು. ಆಮೆ ಸಂತತಿ ನಶಿಸುತ್ತಿರುವುದು, ಅದರ ಸಂರಕ್ಷಣೆ ಕುರಿತು ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ಹಸಿರನ್ನು ಉಳಿಸುವ ಧ್ಯೇಯದೊಂದಿಗೆ ಫ್ರಾನ್ಸ್ ವಿದ್ಯಾರ್ಥಿಗಳು ಗಿಡಗಳನ್ನು ನೆಟ್ಟರು.
ಕಾರ್ಯಕ್ರಮದಲ್ಲಿ ಎಫ್‌ಎಸ್‌ಎಲ್ ಇಂಡಿಯ ಉಪ ನಿರ್ದೇಶಕ ರಾಗ್ಲಂಡ್ ದೇವದಾಸ್, ಫೆಸಿಲಿಟೇಟರ್ ದಿನೇಶ್ ಸಾರಂಗ, ಯೂತ್ ಡೆವಲಪ್‌ಮೆಂಟ್ ಅಧಿಕಾರಿ ರಕ್ಷಾ ವಿ.ಶೆಣೈ ಕೆ., ಮುಖ್ಯ ಸಂಯೋಜಕಿ ನಾಗರತ್ನ ಭಾಗವಹಿಸಿದ್ದರು. ಪ್ರಾಂಶುಪಾಲೆ ಪ್ರತಿಭಾ ಎಂ.ಪಟೇಲ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಮಾಲತಿ, ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಥಮ ಬಿ.ಕಾಂ ವಿದ್ಯಾರ್ಥಿನಿ ದೃತಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.