ADVERTISEMENT

ಹಲ್ಲುಗಳ ಆರೋಗ್ಯಕ್ಕೆ ಮಹತ್ವ ನೀಡಿ: ದಂತ ವೈದ್ಯೆ ಡಾ.ಶಾಂತಲಾ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 2:03 IST
Last Updated 15 ಫೆಬ್ರುವರಿ 2026, 2:03 IST
ಕಾರ್ಕಳ ಜ್ಞಾನಸುಧಾ ಇಂಟರಾಕ್ಟ್ ಕ್ಲಬ್‌ನ ವತಿಯಿಂದ ದಂತ ಆರೋಗ್ಯ ಮತ್ತು ಆರೈಕೆಯ ಮಾಹಿತಿ ಕಾರ್ಯಕ್ರಮ ಶುಕ್ರವಾರ ಸಂಸ್ಥೆಯಲ್ಲಿ ನಡೆಯಿತು.
ಕಾರ್ಕಳ ಜ್ಞಾನಸುಧಾ ಇಂಟರಾಕ್ಟ್ ಕ್ಲಬ್‌ನ ವತಿಯಿಂದ ದಂತ ಆರೋಗ್ಯ ಮತ್ತು ಆರೈಕೆಯ ಮಾಹಿತಿ ಕಾರ್ಯಕ್ರಮ ಶುಕ್ರವಾರ ಸಂಸ್ಥೆಯಲ್ಲಿ ನಡೆಯಿತು.   

ಕಾರ್ಕಳ: ‘ಆರೋಗ್ಯಕರ ಜೀವನಕ್ಕೆ ಹಲ್ಲುಗಳ ಆರೋಗ್ಯವೂ ಮುಖ್ಯ’ ಎಂದು ದಂತ ವೈದ್ಯೆ ಡಾ.ಶಾಂತಲಾ ಹೇಳಿದರು.

ಇಲ್ಲಿನ ಜ್ಞಾನಸುಧಾ ಇಂಗ್ಲಿಷ್ ಮಾಧ್ಯಮ ಶಾಲೆ ಮತ್ತು ಪ್ರೌಢಶಾಲೆಯಲ್ಲಿ ಇಂಟರ್‍ಯಾಕ್ಟ್ ಕ್ಲಬ್ ವತಿಯಿಂದ ಶುಕ್ರವಾರ ಆಯೋಜಿಸಿದ್ದ ದಂತ ಆರೋಗ್ಯ ಮತ್ತು ಆರೈಕೆ ಕುರಿತು ವಿದ್ಯಾರ್ಥಿಗಳಿಗೆ ನಡೆದ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮೌಖಿಕ ನೈರ್ಮಲ್ಯ, ಹಲ್ಲು ಉಜ್ಜುವ ವಿಧಾನ, ಹಲ್ಲುಗಳು, ವಸಡುಗಳ ಆರೋಗ್ಯ ತಪಾಸಣೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.

ಜ್ಞಾನಸುಧಾ ಇಂಗ್ಲಿಷ್ ಮಾಧ್ಯಮ ಶಾಲೆ ಮತ್ತು ಪ್ರೌಢಶಾಲೆ ಉಪ ಪ್ರಾಂಶುಪಾಲೆ ವಾಣಿ ಕೆ, ಸಾರ್ವಜನಿಕ ಸಂಪರ್ಕಾಧಿಕಾರಿ ಜ್ಯೋತಿ ಪದ್ಮನಾಭ ಭಂಡಿ, ಇಂಟರ್‍ಯಾಕ್ಟ್ ಕ್ಲಬ್ ಸಂಯೋಜಕಿ ದಿವ್ಯಾ ಭಾಗವಹಿಸಿದ್ದರು. ಶಿಕ್ಷಕಿ ಸುಪ್ರಿಯಾ ನಿರೂಪಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.