ADVERTISEMENT

‘ಗೋವಾ, ಕೇರಳ ಮಾದರಿ ಅಭಿವೃದ್ಧಿಗೆ ಒತ್ತು’

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 16:27 IST
Last Updated 5 ಡಿಸೆಂಬರ್ 2022, 16:27 IST
ಮಲ್ಪೆ ಬೀಚ್‌ನಲ್ಲಿ ಈಚೆಗೆ ನಡೆದ ಬೀಚ್‌ ಅಡ್ವೆಂಚರ್ ವಾಟರ್ಸ್ ಸ್ಫೋರ್ಟ್ಸ್‌ ವರ್ಷಾಚರಣೆ ಹಾಗೂ ವಿಂಚ್ ಪ್ಯಾರಾಸೇಲಿಂಗ್ ಬೋಟ್ ಉದ್ಘಾಟನೆಯನ್ನು ಉದ್ಯಮಿ ಜಿ.ಶಂಕರ್ ನೆರವೇರಿಸಿದರು.
ಮಲ್ಪೆ ಬೀಚ್‌ನಲ್ಲಿ ಈಚೆಗೆ ನಡೆದ ಬೀಚ್‌ ಅಡ್ವೆಂಚರ್ ವಾಟರ್ಸ್ ಸ್ಫೋರ್ಟ್ಸ್‌ ವರ್ಷಾಚರಣೆ ಹಾಗೂ ವಿಂಚ್ ಪ್ಯಾರಾಸೇಲಿಂಗ್ ಬೋಟ್ ಉದ್ಘಾಟನೆಯನ್ನು ಉದ್ಯಮಿ ಜಿ.ಶಂಕರ್ ನೆರವೇರಿಸಿದರು.   

ಉಡುಪಿ: ಗೋವಾ ಹಾಗೂ ಕೇರಳ ಮಾದರಿಯಲ್ಲಿ ಉಡುಪಿ ಜಿಲ್ಲೆಯಲ್ಲೂ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತಿರುವುದು ಶ್ಲಾಘನೀಯ ಎಂದು ಜಿ.ಶಂಕರ್ ಪ್ಯಾಮಿಲಿ ಟ್ರಸ್ಟ್‌ ಪ್ರವರ್ತಕರಾದ ಜಿ.ಶಂಕರ್ ಅಭಿಪ್ರಾಯಪಟ್ಟರು.

ಮಲ್ಪೆ ಬೀಚ್‌ನಲ್ಲಿ ಈಚೆಗೆ ಬೀಚ್‌ ಅಡ್ವೆಂಚರ್ ವಾಟರ್ಸ್ ಸ್ಫೋರ್ಟ್ಸ್‌ ವರ್ಷಾಚರಣೆ ಹಾಗೂ ವಿಂಚ್ ಪ್ಯಾರಾಸೇಲಿಂಗ್ ಬೋಟ್ ಉದ್ಘಾಟಿಸಿ ಮಾತನಾಡಿ, ಪ್ರವಾಸಿಗರನ್ನು ಹೆಚ್ಚಾಗಿ ಸೆಳೆಯುವ ವಾಟರ್ ಸ್ಪೋರ್ಟ್ಸ್‌ಗಳು ಮಲ್ಪೆ ಬೀಚ್‌ನಲ್ಲಿರುವುದು ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ ಎಂದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಮಾತನಾಡಿ, ಅಡ್ವೆಂಚರ್‌ ವಾಟರ್‌ ಸ್ಪೋರ್ಟ್ಸ್‌ ಸಂಸ್ಥೆ ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರಿಗೆ ಮನರಂಜನೆ ನೀಡುವಂತಹ ಕ್ರೀಡೆಗಳನ್ನು ಆಯೋಜಿಸುತ್ತಿರುವುದು ಅಭಿನಂದನೀಯ. ಇಂತಹ ಪ್ರಯತ್ನಗಳು ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.

ADVERTISEMENT

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು. ಸಾಧಕರನ್ನು ಸನ್ಮಾನಿಸಲಾಯಿತು.

ಶಾಸಕ ರಘುಪತಿ ಭಟ್, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್‌, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್‌, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮಲ್ಪೆ ಬೀಚ್‌ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪಾಂಡುರಂಗ ಮಲ್ಪೆ, ನಗರಸಭಾ ಸದಸ್ಯ ವಿಜಯ್ ಕೊಡವೂರು, ಸುಂದರ್‌ ಜೆ.ಕಲ್ಮಾಡಿ, ಎಡ್ಲಿನ್ ಕರ್ಕಡ, ವಿಜಯ್ ಕುಂದರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.