ಬ್ರಹ್ಮಾವರ: ಕೋಟ ಪಡುಕೆರೆ ಕಡಲ ತೀರದಲ್ಲಿ ಪ್ರವಾಸಿಗರು ಎಲ್ಲೆಂದರಲ್ಲಿ ಕಸ ಎಸೆಯುತ್ತಿರುವುದನ್ನು ಮನಗಂಡು ಕೋಟ ಮಣೂರು ಗೀತಾನಂದ ಫೌಂಡೇಷನ್ ವತಿಯಿಂದ ಸಮುದ್ರದ ದಡದಲ್ಲಿ ನೂತನ ಮಾದರಿಯ ಡಸ್ಟ್‌ಬಿನ್ ರಚಿಸಿ ಕೋಟ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭ ಮಾತನಾಡಿದ ಗೀತಾನಂದ ಫೌಂಡೇಷನ್‌ನ ಪ್ರವರ್ತಕ ಆನಂದ ಸಿ ಕುಂದರ್, ‘ಈ ಹೊಸ ಮಾದರಿಯ ಕಸ ಸಂಗ್ರಹಣೆ ಗೋಲಕ್ಕೆ ಪ್ರವಾಸಿಗರು ಕಸವನ್ನು ಹಾಕಿ, ಬೀಚ್‌ನ್ನು ತ್ಯಾಜ್ಯಮುಕ್ತವಾಗಿಸಬೇಕು. ಇದರಿಂದ ನಾಗರಿಕರಲ್ಲಿ ಕಸ ವಿಲೇವಾರಿಯ ಸಂಸ್ಕೃತಿ ಬೆಳೆಯಲಿ’ ಎಂದು ಆಶಿಸಿದರು.
ಕೋಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುರೇಶ ಬಂಗೇರ ಪ್ರಶಂಸಾ ಪತ್ರವನ್ನು ವಾಚಿಸಿ, ಆನಂದ ಸಿ ಕುಂದರ್ ಅವರಿಗೆ ನೀಡಿದರು.
ಪಂಚಾಯಿತಿ ಉಪಾಧ್ಯಕ್ಷ ಪಾಂಡು ಪೂಜಾರಿ, ಕಾರ್ಯದರ್ಶಿ ಶೇಖರ ಮರವಂತೆ, ಎಸ್‌ಎಲ್‌ಆರ್‌ಎಂ ಘಟಕದ ಮೇಲ್ವಿಚಾರಕಿ ಭವ್ಯ, ಜನತಾ ಸಂಸ್ಥೆಯ ಎಜಿಎಂ ಶ್ರೀನಿವಾಸ ಕುಂದರ್, ಫ್ಯಾಕ್ಟರಿ ವ್ಯವಸ್ಥಾಪಕ ಮಿಥುನ್, ಗೀತಾನಂದ ಫೌಂಡೇಷನ್‌ನ ಪ್ರತಿನಿಧಿ ರವಿಕಿರಣ್, ದೀಕ್ಷಿತಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.