ADVERTISEMENT

ಶಿಕ್ಷಣದಿಂದ ಆರೋಗ್ಯಕರ ಸಮಾಜ: ಕೋಟ

ಮೂಳೂರು ಅಲ್‌ಇಹ್ಸಾನ್ ಮಹಿಳಾ ಕಾಲೇಜು ಉದ್ಘಾಟನಾ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 3:21 IST
Last Updated 27 ಜೂನ್ 2022, 3:21 IST
ಮೂಳೂರಿನ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಅಧೀನದಲ್ಲಿರುವ ಅಲ್- ಇಹ್ಸಾನ್ ಮಹಿಳಾ ಕಾಲೇಜು ಕಟ್ಟಡವನ್ನು ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು
ಮೂಳೂರಿನ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಅಧೀನದಲ್ಲಿರುವ ಅಲ್- ಇಹ್ಸಾನ್ ಮಹಿಳಾ ಕಾಲೇಜು ಕಟ್ಟಡವನ್ನು ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು   

ಪಡುಬಿದ್ರಿ: ಆರೋಗ್ಯಕರ ಸಮಾಜ ಸೃಷ್ಟಿಯಾಗಬೇಕಾದರೆ ಶಿಕ್ಷಣ ಅಗತ್ಯ. ಸಮಾಜದಲ್ಲಿರುವ ಕಡುಬಡವರ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕು ಎಂಬುದು ಸಂವಿಧಾನದ ಆಶಯ. ಸುನ್ನೀ ಸೆಂಟರ್ ಈ ನಿಟ್ಟಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆಗೆ ಸರ್ಕಾರದ ಎಲ್ಲಾ ಅನುದಾನ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಮೂಳೂರಿನ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಅಧೀನದಲ್ಲಿರುವ ಅಲ್- ಇಹ್ಸಾನ್ ಮಹಿಳಾ ಕಾಲೇಜು ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ವಿರೋಧ ಪಕ್ಷದ ಉಪನಾಯಕ ಯು.ಟಿ. ಖಾದರ್, ದೇಶವು ಬಲಿಷ್ಠವಾಗಬೇಕಾದರೆ ಶಿಕ್ಷಣದ ಅಗತ್ಯವಿದೆ. ಜನಪ್ರತಿನಿಧಿಗಳು, ಅಧಿಕಾರಿಗಳಿಂದ ದೇಶ ಬಲಿಷ್ಠವಾಗಲು ಸಾಧ್ಯವಿಲ್ಲ. ಉತ್ತಮ ಜನಾಂಗವನ್ನು ನಿರ್ಮಾಣ ಮಾಡಬೇಕು. ಪ್ರತಿಯೊಬ್ಬರಿಗೂ ಶಿಕ್ಷಣ ಸಿಗುವಂತಾಗಬೇಕು. ಭವಿಷ್ಯದಲ್ಲಿ ದೇಶವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಯಾರೆಲ್ಲಾ ಶಿಕ್ಷಣಕ್ಕೆ ಒತ್ತು ನೀಡಿ ಶಿಕ್ಷಣಕ್ಕಾಗಿ ಸೇವೆ ಸಲ್ಲಿಸುತ್ತಾರೆ ಅವರು ನಿಜವಾದ ದೇಶ ಪ್ರೇಮಿಗಳಾಗುತ್ತಾರೆ ಎಂದರು

ADVERTISEMENT

ಶಾಸಕ ಲಾಲಾಜಿ ಅರ್. ಮೆಂಡನ್, ವಿನಯಕುಮಾರ್ ಸೊರಕೆ, ಅನಿವಾಸಿ ಉದ್ಯಮಿಗಳಾದ ಅಕ್ರಮ್ ಮುಹಮ್ಮದ್ ಶೇಖ್, ಅಲ್‌ಇಹ್ಸಾನ್ ಮಹಿಳಾ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎಂ.ಇ. ಮೂಳೂರು, ಅಬ್ದುಲ್ ರಝಾಕ್ ಯುಎಇ, ರಾಜ್ಯ ವಕ್ಫ್ ಬೋರ್ಡು ಅಧ್ಯಕ್ಷ ಶಾಫಿ ಸಅದಿ, ಅಬೂಸಾಲಿಹ್ ಯುಎಇ, ಗ್ರಾಮ ಪಂಚಾಯತ್ ಒಕ್ಕೂಟದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಕಾಪು, ಬೆಳಗಾವಿ ವಕ್ಫ್ ಸಲಹಾ ಮಂಡಳಿ ಅಧ್ಯಕ್ಷ ಮುಸ್ತಾಕ್ ಫಾರೂಕಿ, ಮುಹಮ್ಮದ್ ಇಜುಜಾದ್ದೀನ್, ಮೀಫ್ ಅಧ್ಯಕ್ಷ ಮೂಸಬ್ಬ, ಸಯ್ಯದ್ ತ್ವಾಹಾ ಬಾಫಕೀ ತಂಙಳ್ ಯುಎಇ, ಅಲ್ ಇಹ್ಸಾನ್ ಸಂಸ್ಥೆಯ ಕಾರ್ಯಾಧ್ಯಕ್ಷ ಸಯ್ಯದ್ ಅಹಮದ್, ಮುಕ್ತಾರ್ ತಂಙಳ್ ಕುಂಬೋಳ್, ಶರೀಫ್ ಹಾಜಿ ನ್ಯಾಷನಲ್ ಗೋಲ್ಡ್ , ಮೂಳೂರು ಜುಮಾ ಮಸೀದಿ ಅಧ್ಯಕ್ಷ ಮುರಾದ್ ಆಲಿ, ಸೆಂಟ್ರಲ್ ಕಮಿಟಿ ಕಾರ್ಯಾಧ್ಯಕ್ಷ ಸಯ್ಯದ್ ಮುಹಮ್ಮದ್ ಉಚ್ಚಿಲ, ಕ್ರೆಸೆಂಟ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ಮುಖ್ಯಸ್ಥರಾದ ಶಂಶುದ್ದೀನ್, ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸುಧಾಮ ಶೆಟ್ಟಿ, ಸಂಸ್ಥೆಯ ಉಪಾಧ್ಯಕ್ಷ ವಲವೂರು ಸಅದಿ, ನ್ಯಾಯವಾದಿ ಮುಹಮ್ಮದ್ ಆಲಿ ಕಾಪು, ಮಿಸ್ಬಾಹ್ ಮಹಿಳಾ ಕಾಲೇಜು ಅಧ್ಯಕ್ಷ ಮುಮ್ತಾಝ್ ಆಲಿ, ದಕ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್, ಸ್ಥಳದಾನ ಮೊಹಿದಿನ್ ಹಾಜಿ ಮೂಳೂರು, ಸುಲ್ತಾನ್ ಗೋಲ್ಡ್‌ನ ಅಬ್ದುಲ್ ರವೂಫ್, ಕುತ್ಯಾರು ನವೀನ್ ಶೆಟ್ಟಿ, ಮುಹಮ್ಮದ್ ಆಲಿ ಕುಂಞಿ ತಂಞಳ್, ತ್ವಾಹಾ ಬಾಫಕಿ ತಂಙಳ್, ಸಂಯುಕ್ತ ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ನೇಜಾರು, ಅಲ್‌ಇಹ್ಸಾನ್ ಮಹಿಳಾ ಶರೀಅತ್ ಕಾಲೇಜಿನ ಪ್ರಾಂಶುಪಾಲರಾದ ಮುಹಮ್ಮದ್ ಅಲ್ ಕಾಸಿಮಿ ಅಳಕೆಮಜಲು, ಅಲ್‌ಇಹ್ಸಾನ್ ಹಾಫಿಝ್ ಕುರ್‌ಆನ್ ಪ್ರಾಂಶುಪಾಲ ಹಾಫಿಝ್ ಹಾರಿಸ್ ಸಅದಿ, ಅಲ್‌ಇಹ್ಸಾನ್ ಸಂಸ್ಥೆಯ ಮ್ಯಾನೇಜರ್ ಮುಸ್ತಫಾ ಸಅದಿ, ಅಲ್‌ಇಹ್ಸಾನ್ ಸಂಸ್ಥೆಯ ಪ್ರಾಂಶುಆಲ ಹಬೀಬ್ ರೆಹ್ಮಾನ್ ಉಪಸ್ಥಿತರಿದ್ದರು.

ಅಲ್‌ಇಹ್ಸಾನ್ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಶಾಕ್ ಬೊಳ್ಳಾಯಿ ಸ್ವಾಗತಿಸಿದರು. ವೈ.ಬಿ.ಸಿ. ಮೂಳೂರು ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.