ADVERTISEMENT

ಉಡುಪಿ: ಜೋಮ್ಲು ಕ್ಷೇತ್ರದಲ್ಲಿ ಎಳ್ಳಮವಾಸ್ಯೆ, ತೀರ್ಥೋತ್ಸವ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 5:18 IST
Last Updated 20 ಡಿಸೆಂಬರ್ 2025, 5:18 IST
ದೇವರ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ಬಂದ ಭಕ್ತರು 
ದೇವರ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ಬಂದ ಭಕ್ತರು    

ಹೆಬ್ರಿ: ಪ್ರಸಿದ್ಧ ಕ್ಷೇತ್ರ ಶ್ರೀ ಕ್ಷೇತ್ರ ಜೋಮ್ಲುವಿನಲ್ಲಿ ಎಳ್ಳಮವಾಸ್ಯೆಯ ಅಂಗವಾಗಿ ಶುಕ್ರವಾರ ಶ್ರೀಕ್ಷೇತ್ರ ಜೋಮ್ಲು ತೀರ್ಥೋತ್ಸವ, ವಾರ್ಷಿಕ ಜಾತ್ರೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಿತು.

ಭಕ್ತರು ವಿವಿಧ ಭಾಗಗಳಿಂದ ಬಂದು ಪವಿತ್ರ ಸೀತಾನದಿಯಲ್ಲಿ ತೀರ್ಥಸ್ನಾನ ಮಾಡಿ ಶ್ರೀ ಬೊಬ್ಬರ್ಯ ದೇವರ ದರ್ಶನ ಪಡೆದರು. ಮುಂಜಾನೆ 3 ಗಂಟೆಯಿಂದಲೇ ಭಕ್ತರು ಬರುತ್ತಿದ್ದರು. ಮಧ್ಯಾಹ್ನ ಮಹಾ ಅನ್ನಪ್ರಸಾದದಲ್ಲೂ ಪಾಲ್ಗೊಂಡರು.

ಚಾರ ಶ್ರೀ ವಿವೇಕಾನಂದ ಯುವ ವೇದಿಕೆ ಮತ್ತು ಶ್ರೀ ಕ್ಷೇತ್ರ ಜೋಮ್ಲು ಬೊಬ್ಬರ್ಯ ದೇವರ ಸೇವಾ ಸಮಿತಿ ಹಂದಿಕಲ್ಲು ಚಾರದ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ನವಕಪ್ರದಾನ ಹೋಮ, ಶುದ್ಧಕಲಶ, ಕೊಟ್ಟೆ ಕಡುಬು ಸೇವೆ, ಏಣಿ ಮುಹೂರ್ತ, ಶುಕ್ರವಾರ ಎಳ್ಳಮಾವಾಸ್ಯೆಯ ಪ್ರಯುಕ್ತ ತೀರ್ಥಸ್ನಾನ, ಮಹಾಅನ್ನಸಂತರ್ಪಣೆ ಮುಂತಾದ ಕಾರ್ಯಗಳು ಗುರುವಾರ ಜರುಗಿದವು.  

ADVERTISEMENT
ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಶ್ರೀ ಬೊಬ್ಬರ್ಯ ದೇವರನ್ನು ವಿಶೇಷವಾಗಿ ಅಲಂಕರಿಸಿ ಪೂಜಿಸಲಾಗಿತ್ತು