ADVERTISEMENT

ಉಡುಪಿ: ಸಮುದ್ರದಲ್ಲಿ 40 ತಾಸು ಕಳೆದು ಬದುಕುಳಿದ ಮೀನುಗಾರ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2023, 16:34 IST
Last Updated 10 ನವೆಂಬರ್ 2023, 16:34 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಉಡುಪಿ: ತಮಿಳುನಾಡಿನ ಮೀನುಗಾರಿಕಾ ಬೋಟ್‌ನಿಂದ ಆಯತಪ್ಪಿ ಬಿದ್ದು 40 ತಾಸಿಗೂ ಹೆಚ್ಚು ಕಾಲ ಸಮುದ್ರದಲ್ಲಿ ಈಜುತ್ತಾ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ವ್ಯಕ್ತಿಯನ್ನು ಬೈಂದೂರು ತಾಲ್ಲೂಕಿನ ಮೀನುಗಾರರು ಈಚೆಗೆ ರಕ್ಷಿಸಿದ್ದಾರೆ.

‘ಬದುಕುಳಿದ ಮೀನುಗಾರ ತಮಿಳುನಾಡಿನ ಮೂಲದವನಾಗಿದ್ದು ಸುರಕ್ಷಿತವಾಗಿ ಹಸ್ತಾಂತರ ಮಾಡಲಾಗಿದೆ’ ಎಂದು ಬೈಂದೂರು ತಾಲ್ಲೂಕಿನ  ಮೀನುಗಾರರು ತಿಳಿಸಿದ್ದಾರೆ.

ADVERTISEMENT

ಘಟನೆಯ ವಿವರ:

ತಮಿಳುನಾಡಿನ ಲಿಪ್ಟನ್ ಮೇರಿ ಹೆಸರಿನ ಬೋಟ್‌ನಲ್ಲಿದ್ದ ಮೀನುಗಾರ ಶೌಚ ಮಾಡುವಾಗ ಆಯತಪ್ಪಿ ಸಮುದ್ರಕ್ಕೆ ಬಿದ್ದಿದ್ದ. ಕತ್ತಲಾಗಿದ್ದರಿಂದ ಸಮುದ್ರಕ್ಕೆ ಬಿದ್ದಿದ್ದು ಬೋಟ್‌ನಲ್ಲಿದ್ದ ಇತರ ಮೀನುಗಾರರ ಗಮನಕ್ಕೆ ಬರಲಿಲ್ಲ. ಈಜುತ್ತಲೇ ರಕ್ಷಣೆಗೆ ಅಂಗಲಾಚುತ್ತಾ 40 ತಾಸಿಗೂ ಹೆಚ್ಚು ಕಾಲ ಮೀನುಗಾರ ಸಮುದ್ರದಲ್ಲಿಯೇ ಕಳೆದಿದ್ದಾನೆ.

ಇತ್ತ ಬೈಂದೂರಿನಿಂದ ಮೀನುಗಾರಿಕೆಗೆ ತೆರಳಿದ್ದ ಸೀ ಸಾಗರ್ ಬೋಟ್‌ನಲ್ಲಿದ್ದ ಮೀನುಗಾರರಿಗೆ 14 ನಾಟಿಕಲ್ ಮೈಲು ದೂರದಲ್ಲಿ ತಮಿಳುನಾಡಿನ ಮೀನುಗಾರ ಕಣ್ಣಿಗೆ ಬಿದ್ದಿದ್ದಾನೆ. ತಕ್ಷಣ ರಕ್ಷಣೆಗೆ ದಾವಿಸಿದ ಮೀನುಗಾರರು ಆತನನ್ನು ಬೋಟ್‌ನೊಳಗೆ ಎಳೆದು ಉಪಚರಿಸಿ ನೀರು, ಆಹಾರ ನೀಡಿದ್ದಾರೆ.

ಬಳಿಕ ವೈರ್‌ಲೆಸ್‌ ಸಂವಹನದ ಮೂಲಕ ತಮಿಳುನಾಡು ಮೂಲದ ಬೋಟ್‌ ಪತ್ತೆಹಚ್ಚಿ ಮೀನುಗಾರರನ್ನು ಒಪ್ಪಿಸಿದ್ದಾರೆ. ಮೀನುಗಾರ ಬದುಕುಳಿದಿರುವ ಸಾಧ್ಯತೆ ಇಲ್ಲ ಎಂದು ಆತನ ಶವಕ್ಕಾಗಿ ತಮಿಳುನಾಡು ಮೀನುಗಾರರು ಹುಟಕಾಟ ನಡೆಸುತ್ತಿದ್ದು. ಆತ ಬದುಕುಳಿದಿರುವುದು ನಿಜಕ್ಕೂ ಪವಾಡ ಎನ್ನುತ್ತಾರೆ ಬೈಂದೂರು ಮೀನುಗಾರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.