ಬ್ರಹ್ಮಾವರ: ಕುಂಜಾಲು ಹೆಬ್ರಿ ಮುಖ್ಯರಸ್ತೆ ಬದಿಯ ಹೇರೂರು ಕ್ರಾಸ್ ಬಳಿ ಇರುವ ಚಾಂತಾರು ಗ್ರಾಮ ಪಂಚಾಯಿತಿಯ ಕಸ ವಿಲೇವಾರಿ ಘಟಕದಿಂದ ಸಾಂಕ್ರಾಮಿಕ ರೋಗ ಹರಡುತ್ತದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕೃಷಿ ಕೇಂದ್ರದ ಯಕ್ಷಿಣಿ ನಗರದ ಎದುರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರು ವಾಸಿಸುವ ಪರಿಸರ ಇದಾಗಿದ್ದು, ಗ್ರಾ.ಪಂ. ತಾತ್ಕಾಲಿಕ ಒಣ ಕಸ ವಿಲೇವಾರಿಗೆ ಶೇಖರಣೆ ಮಾಡಿ ಇಟ್ಟಿದೆ. ಹತ್ತಿರದಲ್ಲೇ ಕುಡಿಯುವ ನೀರಿನ ಘಟಕ, ಓವರ್ ಹೆಡ್ ಟ್ಯಾಂಕ್, ಅಂಗನವಾಡಿ ಕೇಂದ್ರ, 2 ಬಸ್ ನಿಲ್ದಾಣಗಳಿವೆ. ಡೆಂಗಿ, ಮಲೇರಿಯದಂತಹ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಎದುರಾಗಿದೆ.
ಈ ಬಗ್ಗೆ ಗ್ರಾಮಸ್ಥರು ಶಾಸಕ ಯಶಪಾಲ್ ಸುವರ್ಣ ಅವರಿಗೆ ಮನವಿ ಮಾಡಿದ್ದು, ಶಾಸಕರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಘಟಕವನ್ನು ಶೀಘ್ರ ಸ್ಥಳಾಂತರಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಸ್ಥಳೀಯ ಮುಖಂಡ ಆನಂದ, ಗ್ರಾ.ಪಂ. ಸದಸ್ಯರಾದ ನಿತ್ಯಾನಂದ ಪೂಜಾರಿ, ರೇವತಿ, ಸ್ಥಳೀಯರಾದ ಉದಯ ಕುಮಾರ್, ಜಯರಾಮ ನಾಯಕ್, ಅಶೋಕ ಕುಮಾರ್ ಶೆಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.