ADVERTISEMENT

ಮೊಟ್ಟೆ ಹಗರಣ: ಮಹಿಳಾ ಸಂಕುಲಕ್ಕೆ ಕಳಂಕ: ಗೀತಾ ವಾಗ್ಲೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2021, 16:14 IST
Last Updated 24 ಜುಲೈ 2021, 16:14 IST
ಗೀತಾ ವಾಗ್ಲೆ
ಗೀತಾ ವಾಗ್ಲೆ   

ಉಡುಪಿ: ‘ಗರ್ಭಿಣಿಯರಿಗೆ, ಬಾಣಂತಿಯರಿಗೆ ಹಾಗೂ ಅಪೌಷ್ಟಿಕತೆ ಹೊಂದಿರುವ ಮಕ್ಕಳಿಗೆ ಸರ್ಕಾರ ‘ಮಾತೃಪೂರ್ಣ’ ಯೋಜನೆಯಡಿ ನೀಡುತ್ತಿರುವ ಮೊಟ್ಟೆಯಲ್ಲೂ ಭ್ರಷ್ಟಾಚಾರ ಎಸಗಲು ಮುಂದಾದ ಸಚಿವೆ ಶಶಿಕಲಾ ಜೊಲ್ಲೆ ಮಹಿಳಾ ಸಂಕುಲಕ್ಕೆ ಕಳಂಕ' ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೆ ವಾಗ್ದಾಳಿ ನಡೆಸಿದ್ದಾರೆ.

ಮಹಿಳೆಯರ ಕಲ್ಯಾಣಕ್ಕಾಗಿ ಟೊಂಕಕಟ್ಟಿ ನಿಲ್ಲಬೇಕಾಗಿದ್ದ ಇಲಾಖೆಯ ಸಚಿವೆ ಗರ್ಭಿಣಿಯರಿಗೆ ನೀಡುವ ಮೊಟ್ಟೆಯಲ್ಲಿ ಅವ್ಯವಹಾರಕ್ಕೆ ಮುಂದಾಗಿದ್ದು ನಾಚಿಕೆಗೇಡು. ಬಿಜೆಪಿಯ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಟೀಕಿಸಿದ್ದಾರೆ.

ಕೊರೊನಾದಿಂದ ಜನರು ಹೊತ್ತಿನ ಊಟಕ್ಕೂ ತತ್ತರಿಸುತ್ತಿರುವಾಗ ಬಿಜೆಪಿ ಸರ್ಕಾರದ ಸಚಿವರು, ಶಾಸಕರು ಲೂಟಿ ಮಾಡುವ ಕಾಯಕದಲ್ಲಿ ತೊಡಗಿರುವುದು ಅಸಹ್ಯ ಹುಟ್ಟಿಸುತ್ತಿದೆ. ಮಹಿಳೆಯರು ಮಂತ್ರಿಗಳಾದರೆ, ಶಾಸಕರಾದರೆ ಭ್ರಷ್ಟಾಚಾರ ಕಡಿಮೆಯಾದೀತು ಎಂಬ ಅಭಿಪ್ರಾಯ ಸಮಾಜದಲ್ಲಿದೆ. ಆದರೆ ಶಶಿಕಲಾ ಜೊಲ್ಲೆಯವರ ವಿಷಯದಲ್ಲಿ ಮಹಿಳೆಯರು ತಲೆತಗ್ಗಿಸಬೇಕಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ADVERTISEMENT

ಅವ್ಯವಹಾರ ಆರೋಪ ಹೊತ್ತಿರುವ ಸಚಿವೆ ಶಶಿಕಲಾ ಜೊಲ್ಲೆಗೆ ಸಚಿವೆಯಾಗಿ ಮಾತ್ರವಲ್ಲ, ಶಾಸಕಿಯಾಗಿ ಮುಂದುವರಿಯಲೂ ಅರ್ಹತೆ ಇಲ್ಲ. ಕೂಡಲೇ ರಾಜೀನಾಮೆ ನೀಡಬೇಕು ಎಂದು ಗೀತಾ ವಾಗ್ಳೆ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.