ADVERTISEMENT

ಉಡುಪಿ: ಗುರುಪೂಜೆ, ಧಾರ್ಮಿಕ ಸಭೆ, ಸಾಧಕರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 5:40 IST
Last Updated 8 ಸೆಪ್ಟೆಂಬರ್ 2025, 5:40 IST
   

ಹೆಬ್ರಿ: ಮುನಿಯಾಲು ಮಾತಿಬೆಟ್ಟು ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ವತಿಯಿಂದ ನಾರಾಯಣಗುರು ನಗರದಲ್ಲಿರುವ ಸಮುದಾಯ ಭವನದಲ್ಲಿ ನಾರಾಯಣಗುರು ಸ್ವಾಮೀಜಿ ಅವರ 171ನೇ ಜನ್ಮದಿನೋತ್ಸವ, ಗುರುಪೂಜೆ, ಭಜನೆ, ಧಾರ್ಮಿಕ ಸಭೆ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಭಾನುವಾರ ನಡೆಯಿತು.

ಧಾರ್ಮಿಕ ಸಭೆಯಲ್ಲಿ ಜಾನಪದ ಚಿಂತಕ ಅಗತ್ತಾಡಿ ದೋಲ ಬಾರಿಕೆಯ ಶೈಲು ಬಿರ್ವ ಅವರು ನಾರಾಯಣಗುರುಗಳ ಸಂದೇಶ, ತುಳುನಾಡಿನ ತತ್ವಗಳ ಬಗ್ಗೆ ಮಾಹಿತಿ ನೀಡಿದರು. ಶಾಸಕ ಸುನಿಲ್‌ ಕುಮಾರ್‌ ಮಾತನಾಡಿದರು.

ಸಾಧಕರಾದ ಪ್ರಗತಿಪರ ಕೃಷಿಕ ಗೋಪಾಲ ಕುಲಾಲ್‌ ಪಿತ್ತುಲ್‌ ಗುಂಡಿ, ನಾಟಿ ವೈದ್ಯ ಬೊಗ್ರ ಮೇರ, ಸ್ಯಾಕ್ಸೊಪೋನ್‌ ವಾದಕ ಸದಾಶಿವ ಸೇರಿಗಾರ್‌, ಆಯುರ್ವೇದ ವೈದ್ಯ ಡಾ.ರೋಶನ್‌ ಆರ್‌. ಕುಕ್ಕುಜೆ, ಶಿಕ್ಷಕಿಯರಾದ ರಂಜಿತಾ ಪೂಜಾರಿ ಪಡುಕುಡೂರು, ನಂದಿನಿ ಪ್ರಕಾಶ ಪೂಜಾರಿ ಮಾತಿಬೆಟ್ಟು, ವಕೀಲ ಸುಮೀತ್‌ ಪೂಜಾರಿ ಮುನಿಯಾಲು, ರಾಷ್ಟ್ರಮಟ್ಟದ ಬಾಲ ಕರಾಟೆ ಪ್ರತಿಭೆ ಶರಣ್ಯ ಸತೀಶ ಪೂಜಾರಿ ಎಳ್ಳಾರೆ, ಸನ್ವಿತ್‌ ಎಸ್‌. ಪೂಜಾರಿ ಚಟ್ಕಲ್‌ಪಾದೆ, ಜಿಲ್ಲಾಮಟ್ಟದ ಚೆಸ್‌ ಕ್ರೀಡಾಪಟು ಚಿನ್ಮಯ್‌ ಪೂಜಾರಿ ಮಾತಿಬೆಟ್ಟು, ಬಿಪಿಎಡ್‌ ಶೈಕ್ಷಣಿಕ ಸಾಧಕಿ ವರ್ಷಿಣಿ, ಜಿಮ್ನಾಸ್ಟಿಕ್‌ ಇಂಡಿಯನ್‌ ಬುಕ್‌ ಆಫ್‌ ರೆಕಾರ್ಡ್‌ ಸಾಧಕಿ ಆಪ್ತಿ ಆಚಾರ್ಯ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಪಡುಕುಡೂರು ಶಾಲೆ ಮುಖ್ಯಶಿಕ್ಷಕ ಹರೀಶ ಪೂಜಾರಿ ಎಸ್‌. ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿವೇತನ ವಿತರಣೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ ನಡೆಯಿತು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಮುನಿಯಾಲು ಮಾತಿಬೆಟ್ಟು ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಟಿ. ಮಂಜುನಾಥ್‌ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಸರ್ವರ ಸಹಕಾರ ಕೋರಿದರು. ವರಂಗ ಗ್ರಾ.ಪಂ. ಅಧ್ಯಕ್ಷ ಸಂತೋಷ ಅಮೀನ್‌ ಅಂಡಾರು, ವಿಠ್ಠಲ ಪೂಜಾರಿ ವರಂಗ, ಪೆರ್ವಾಜೆ ಮಹಾಲೀಂಗೇಶ್ವರ ದೇವಸ್ಥಾನದ ಆಡಳಿತ ಮೋಕ್ತೇಸರ ಕೆ. ಪ್ರಭಾಕರ ಬಂಗೇರ, ಅಜೆಕಾರು ನಾರಾಯಣಗುರು ಸ್ವಾಮಿ ಸೇವಾ ಸಂಘದ ಅಧ್ಯಕ್ಷ ರತ್ನಾಕರ ಆಮೀನ್‌, ಕಾರ್ಕಳ ಯುವವಾಹಿನಿ ಘಟಕದ ಅಧ್ಯಕ್ಷೆ ಮಮತಾ ಅಂಚನ್‌, ಅಣ್ಣಯ್ಯ ಜಿ. ಪೂಜಾರಿ ಮಾತಿಬೆಟ್ಟು, ದೇಜು ಡಿ. ಪೂಜಾರಿ ಸಿರಿಬೈಲು, ಸಂತೋಷ್‌ ಜಾರಣಿಗೆ, ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಪ್ರಮಲ್‌ ಕುಮಾರ್‌, ಮುನಿಯಾಲು ಗುರುನಾರಾಯಣ ಸ್ವಾಮಿ ಸೇವಾ ಸಂಘದ ಗೌರವಾಧ್ಯಕ್ಷ ಎಸ್.ಟಿ.ಕುಂದರ್‌, ಸ್ಥಾಪಕಾಧ್ಯಕ್ಷ ಎಂ. ಆನಂದ ಪೂಜಾರಿ, ಉಪಾಧ್ಯಕ್ಷರಾದ ಕೆ. ಮಂಜುನಾಥ್‌, ಹರೀಶ ಪೂಜಾರಿ, ಪ್ರಧಾನ ಕಾರ್ಯದರ್ಶಿ ರತ್ನಾಕರ ಪೂಜಾರಿ, ಕೋಶಾಧಿಕಾರಿ ರಾಜು ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಹರೀಶ್‌, ಕಾರ್ಯದರ್ಶಿ ರೇಖಾ ಸತೀಶ್‌, ಯುವ ಘಟಕದ ಅಧ್ಯಕ್ಷ ಸತೀಶ ಪೂಜಾರಿ, ಕಾರ್ಯದರ್ಸಿ ನವೀನ್‌ ಪೂಜಾರಿ, ವಿವಿಧ ಪದಾಧಿಕಾರಿಗಳು ಭಾಗವಹಿಸಿದ್ದರು. ಆನಂದ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಪ್ರಕಾಶ ಪೂಜಾರಿ ಮಾತಿಬೆಟ್ಟು ನಿರೂಪಿಸಿದರು. ರತ್ನಾಕರ ಪೂಜಾರಿ ಸ್ವಾಗತಿಸಿದರು. ಹರೀಶ ಪೂಜಾರಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.