ADVERTISEMENT

ಹೆಬ್ರಿಯ ಸೀತಾನದಿ ಕೂಡ್ಲು ಫಾಲ್ಸ್‌ನಲ್ಲಿ ಜಾರಿ ಬಿದ್ದಿದ್ದ ಬೆಂಗಳೂರಿನ ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 8:06 IST
Last Updated 19 ಡಿಸೆಂಬರ್ 2025, 8:06 IST
ಮನ್ವಿತ್‌ 
ಮನ್ವಿತ್‌    

ಹೆಬ್ರಿ: ಹೆಬ್ರಿಯ ಸೀತಾನದಿ ಕೂಡ್ಲು ಫಾಲ್ಸ್‌ನಲ್ಲಿ ಬಂಡೆಕಲ್ಲಿನಿಂದ ಜಾರಿಬಿದ್ದು ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮೃತಪಟ್ಟಿದ್ದಾರೆ.

ತಾಲ್ಲೂಕಿನ ಆರ್ಡಿ ಕೊಂಜಾಡಿಯ ಮನ್ವಿತ್‌ (25) ತನ್ನ ಪೋಷಕರೊಂದಿಗೆ ಬೆಂಗಳೂರಿನಲ್ಲಿ ವಾಸವಿದ್ದು ಡಿಸೆಂಬರ್‌ 12ರಂದು ಕೊಂಜಾಡಿಗೆ ಬಂದಿದ್ದರು

ಡಿಸೆಂಬರ್‌ 14ರಂದು ಸ್ನೇಹಿತರೊಂದಿಗೆ ಕೂಡ್ಲು ಫಾಲ್ಸ್‌ ಗೆ ತೆರಳಿದ್ದರು. ಸ್ನೇಹಿತರು ಸ್ನಾನ ಮಾಡುವಾಗ ಮನ್ವಿತ್‌ ಎತ್ತರದ ಬಂಡೆಯ ಮೇಲೆ ಕುಳಿತುಕೊಂಡಿದ್ದು ಆಕಸ್ಮಿತವಾಗಿ ಜಾರಿ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡಿದ್ದರು. ಮನ್ವಿತ್‌ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.