ADVERTISEMENT

ಹೆಬ್ರಿ: ನಾಗದೇವರ ಶಿಲಾ ಮಂಟಪಕ್ಕೆ ಶಿಲಾನ್ಯಾಸ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2025, 12:29 IST
Last Updated 13 ಮಾರ್ಚ್ 2025, 12:29 IST
ಕಬ್ಬಿನಾಲೆ ಗೋಪಾಲಕೃಷ್ಣ ದೇವಸ್ಥಾನದ ನಾಗಬನವು ಜೀರ್ಣೋದ್ಧಾರಗೊಳ್ಳುತ್ತಿದ್ದು, ಗುರುವಾರ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು
ಕಬ್ಬಿನಾಲೆ ಗೋಪಾಲಕೃಷ್ಣ ದೇವಸ್ಥಾನದ ನಾಗಬನವು ಜೀರ್ಣೋದ್ಧಾರಗೊಳ್ಳುತ್ತಿದ್ದು, ಗುರುವಾರ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು   

ಹೆಬ್ರಿ: ಕಬ್ಬಿನಾಲೆ ಗೋಪಾಲಕೃಷ್ಣ ದೇವಸ್ಥಾನದ ನಾಗಬನವು ಜೀರ್ಣೋದ್ಧಾರಗೊಳ್ಳುತ್ತಿದ್ದು, ಗುರುವಾರ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.

ಧಾರ್ಮಿಕ ಮುಂದಾಳು ಹೆಬ್ರಿ ಭಾಸ್ಕರ ಜೋಯಿಸ್ ಶಿಲಾನ್ಯಾಸ ನೆರವೇರಿಸಿ, ನಾಗನ ಆರಾಧನೆ ಎಂದರೆ ಅದು ನಿಸರ್ಗದ ಆರಾಧನೆ. ನಾಗನ ಆಲಯವೂ ಪ್ರಾಕೃತಿಕ ಸೌಂದರ್ಯದಿಂದಲೇ ಕೂಡಿರಬೇಕು. ಆ ಹಿನ್ನೆಲೆ ಶಿಲಾಮಂಟಪದ ಬಯಲು ಮಂದಿರದಲ್ಲಿ ನಾಗದೇವರು ಪ್ರತಿಷ್ಠೆಗೊಳ್ಳುತ್ತಿರುವುದು ಸಂತಸ’ ಎಂದರು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಘವೇಂದ್ರ ಭಟ್, ಅರ್ಚಕರಾದ ಲಕ್ಷ್ಮೀಶ ಭಾರದ್ವಾಜ್, ನಾರಾಯಣ ಭಟ್, ವಿನಾಯಕ ಅಡಿಗ ಇದ್ದರು.

ADVERTISEMENT

ಊರಿನ ಪ್ರಮುಖರಾದ ಪರಮೇಶ್ವರ ಹೆಬ್ಬಾರ್, ಮೋಹನ ಹೆಬ್ಬಾರ್, ಶ್ರೀಧರ ಹೆಬ್ಬಾರ್, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಚಂದ್ರಶೇಖರ ಬಾಯರಿ, ಯೋಗೀಂದ್ರ ಹೆಬ್ಬಾರ್, ಸದಾಶಿವ ಶೆಟ್ಟಿ, ಧನಲಕ್ಷ್ಮಿ ಜಗದೀಶ ಪೂಜಾರಿ, ರೇಣುಕಾ ಶೆಟ್ಟಿಗಾರ್, ಗಾಯತ್ರಿ ಮಡಿವಾಳ, ಶೇಖರ ಬಚ್ಚಪ್ಪು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.