ADVERTISEMENT

ಉಡುಪಿ: ಅಹವಾಲು ಸ್ವೀಕಾರ, ಸವಲತ್ತು ವಿತರಣೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 7:00 IST
Last Updated 11 ಫೆಬ್ರುವರಿ 2026, 7:00 IST
ಕಡ್ತಲದಲ್ಲಿ ಮಂಗಳವಾರ ಶಾಸಕ ಸುನೀಲ್‌ ಕುಮಾರ್‌ ಅಹವಾಲು ಸ್ವೀಕಾರಿಸಿದರು. 
ಕಡ್ತಲದಲ್ಲಿ ಮಂಗಳವಾರ ಶಾಸಕ ಸುನೀಲ್‌ ಕುಮಾರ್‌ ಅಹವಾಲು ಸ್ವೀಕಾರಿಸಿದರು.    

ಹೆಬ್ರಿ: ಕಡ್ತಲ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ಕುಂದುಕೊರತೆ, ಅಹವಾಲು ಸ್ವೀಕಾರ ಮತ್ತು ಫಲಾನುಭವಿಗಳಿಗೆ ಸವಲತ್ತು ವಿತರಣಾ ಕಾರ್ಯಕ್ರಮ ಶಾಸಕ ಸುನಿಲ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಶಾಸಕ ಸುನಿಲ್ ಕುಮಾರ್ ಮಾತನಾಡಿ, ಸಾರ್ವಜನಿಕರ ಪ್ರಮುಖ ಸಮಸ್ಯೆಗಳಿಗೆ ಸದನದಲ್ಲಿ ಪ್ರಶ್ನೆ ಮಾಡುವುದಾಗಿ ತಿಳಿಸಿದರು. 

ತಾಲ್ಲೂಕು ಪಂಚಾಯಿತಿ ಇಒ ಪ್ರಶಾಂತ್ ಎಂ.ವಿ, ತಹಶೀಲ್ದಾರ್ ಪ್ರದೀಪ್ ಆರ್, ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ಪಿಡಿಒ ಸುರೇಖಾ ಸ್ವಾಗತಿಸಿದರು. ಗ್ರಾಮ ಆಡಳಿತ ಅಧಿಕಾರಿ ಪ್ರಶಾಂತ್ ವಂದಿಸಿದರು. ಸತೀಶ್ ಪೂಜಾರಿ ನಿರೂಪಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.