ಬ್ರಹ್ಮಾವರ: ಬಾರ್ಕೂರು ಎಜುಕೇಷನಲ್ ಸೊಸೈಟಿ ಆಡಳಿತಕ್ಕೆ ಒಳಪಟ್ಟ ಹೇರಾಡಿಯ ನ್ಯಾಷನಲ್ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಟೊಯೋಟ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯಿಂದ ಅಪ್ರೆಂಟಿಸ್‌ಶಿಪ್ ಕ್ಯಾಂಪಸ್ ಡ್ರೈವ್ ನಡೆಯಿತು.
ಟಿ.ಕೆ.ಎಂ.ನ ಮಾನವ ಸಂಪನ್ಮೂಲ ಅಧಿಕಾರಿ ದಿಲೀಪ್ ಕುಮಾರ್, ಪ್ರೊಡಕ್ಷನ್ ವಿಭಾಗದ ಸುಭಾಶ್ಚಂದ್ರ ಕಂಪನಿಯ ಬಗ್ಗೆ ಮಾಹಿತಿ ನೀಡಿದರು. ಪ್ರೊಡಕ್ಷನ್ ವಿಭಾಗದ ಎಚ್‌ಆರ್ ರೋಶನ್, ಶ್ರೀಪತಿ ಪ್ರಭು, ಮಂಜೇಶ್ ಭಾಗವಹಿಸಿದ್ದರು. ಸಂಸ್ಥೆಯ ಸಂಚಾಲಕ ಬಿ. ರಾಮಚಂದ್ರ ಕಾಮತ್ ಅಧ್ಯಕ್ಷತೆ ವಹಿಸಿದ್ದರು.
ಪ್ರಾಂಶುಪಾಲ ವೆಂಕಟೇಶ ಕ್ರಮಧಾರಿ ಸ್ವಾಗತಿಸಿದರು. ಹಿರಿಯ ಉಪನ್ಯಾಸಕ ಭಾಸ್ಕರ ಉಪಾಧ್ಯ ವಂದಿಸಿದರು. ಉಪನ್ಯಾಸಕ ಮಂಜುನಾಥ ನಾಯ್ಕ ನಿರೂಪಿಸಿದರು. ಸಿಬ್ಬಂದಿ ಹರೀಶ ಹೆಬ್ಬಾರ ಸಹಕರಿಸಿದರು.
ಉಡುಪಿ ಜಿಲ್ಲೆಯ ಸರ್ಕಾರಿ ಅನುದಾನಿತ ಸಂಸ್ಥೆಗಳ ಎಂ.ಎಂ.ವಿ, ಇಲೆಕ್ಟ್ರಿಷಿಯನ್, ಇಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಫಿಟ್ಟರ್, ವೆಲ್ಡರ್, ಎಂ.ಇ.ವಿ. ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.