ADVERTISEMENT

ನೌಕಾಪಡೆಯ ಹಡಗುಗಳ ಗೋಪ್ಯ ಮಾಹಿತಿ ಸೋರಿಕೆ: ಮತ್ತೊಬ್ಬನ ಬಂಧನ

ಬಂಧಿತ ಬಾಂಗ್ಲಾ ಪ್ರಜೆ ಎಂಬ ಶಂಕೆ: ಎಸ್‌ಪಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 18:35 IST
Last Updated 17 ಫೆಬ್ರುವರಿ 2026, 18:35 IST
ಆಲಿಫ್ ಇಸ್ಲಾಮ್
ಆಲಿಫ್ ಇಸ್ಲಾಮ್   

ಉಡುಪಿ: ನೌಕಾಪಡೆಯ ಹಡಗುಗಳ ರಹಸ್ಯ ಮಾಹಿತಿ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಐದನೇ ಆರೋಪಿ ಪಶ್ಚಿಮ ಬಂಗಾಳದ ಜಾಲ್‌ ಫೈಗುರಿ ಜಿಲ್ಲೆಯ, ಪ್ರಸ್ತುತ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನೆಲೆಸಿದ್ದ ಆಲಿಫ್ ಇಸ್ಲಾಮ್ (21) ಎಂಬಾತನನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಬಂಧಿತ ಬಾಂಗ್ಲಾದೇಶದ ಪ್ರಜೆಯಾಗಿರಬಹುದು ಎಂಬ ಶಂಕೆ ಇದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಮ್‌ ಶಂಕರ್‌ ತಿಳಿಸಿದ್ದಾರೆ. ಆರೋಪಿಗಳು ಹಡಗುಗಳಿಗೆ ಸಂಬಂಧಿತ ಗೋಪ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸಿರುವುದು ಈ ಹಿಂದೆ ದೃಢಪಟ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT