
ಕುಂದಾಪುರ: ಕಲಾಕ್ಷೇತ್ರ ಕುಂದಾಪುರ ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ಭಾನುವಾರ ಸಂಜೆ ಆಯೋಜಿಸಿದ ಕನ್ನಡದ ಹಳೆ ಚಲನಚಿತ್ರದ ಹಾಡುಗಳ ‘ಇನಿದನಿ’ ಸಂಗೀತ ರಸಮಂಜರಿ ಕಾರ್ಯಕ್ರಮ ಶೋತೃಗಳ ಮನಸೂರೆಗೊಂಡಿತು.
ಗಾಯಕರಾದ ಬೆಂಗಳೂರಿನ ಅಜಯ್ ವಾರಿಯರ್, ಮೋಹನಕೃಷ್ಣ, ಶಶಿಕಲಾ ಸುನಿಲ್, ಮಂಗಳೂರಿನ ವೈ.ಎನ್. ರವೀಂದ್ರ, ಮಾಲಿನಿ ಕೇಶವ ಪ್ರಸಾದ್ ಅಶೋಕ್ ಸಾರಂಗ್, ಸ್ಥಳೀಯ ಪ್ರತಿಭೆಗಳಾದ ಧಾರಿಣಿ ಕುಂದಾಪುರ, ಪ್ರಾಪ್ತಿ ಹೆಗ್ಡೆ, ಕಮಲ್ ಗಾಯನದ ಮೂಲಕ ಸಂಗೀತ ಪ್ರೇಮಿಗಳನ್ನು ರಂಜಿಸಿದರು.
ಹಿನ್ನೆಲೆ ಸಂಗೀತದಲ್ಲಿ ರಾಜಗೋಪಾಲ್ ಮೂಡುಬಿದಿರೆ, ರಾಜೇಶ್ ಭಾಗವತ್, ಭಾಸ್ಕರ ಕುಂಬ್ಳೆ, ಗಣೇಶ್ ನವಗಿರಿ, ವಾಮನ ಕುಮಾರ್ ಕಾರ್ಕಳ, ಸಿಜಿಮೂನ್ ಕೊಚ್ಚಿನ್, ಗುರುರಾಜ್ ಎಂ.ಜಿ, ಸುಮುಖ್ ಆಚಾರ್ಯ, ವರ್ಷಾ ಕುಂದಾಪುರ, ಟೋನಿ ಡಿಸಿಲ್ವ ಸಹಕರಿಸಿದರು. ಕೆ.ವಿ. ರಮಣ್ ಮೂಡುಬಿದಿರೆ ಕಾರ‌್ಯಕ‌್ರಮ ನಿರೂಪಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಅಧ್ಯಕ್ಷ ಬಿ. ಕಿಶೋರ್ ಕುಮಾರ್, ‘ಈ ಬಾರಿ 14ನೇ ವರ್ಷದ ಕಾರ್ಯಕ್ರಮ ನಡೆಯುತ್ತಿದ್ದು, 90ರ ದಶಕದೊಳಗಿನ, ಅತ್ಯುತ್ತಮ ಸಂಗೀತ ಸಂಯೋಜನೆ ಇರುವ ಹಾಡುಗಳನ್ನು ಗಾಯಕರು ಪ್ರಸ್ತುತಿಪಡಿಸುವರು’ ಎಂದರು.
ಮುಖಂಡ ಕೆ. ಜಯಪ್ರಕಾಶ್ ಹೆಗ್ಡೆ, ಟ್ರಸ್ಟ್ ಕಾರ್ಯದರ್ಶಿ ರಾಮಚಂದ್ರ ಬಿ.ಎನ್, ಟ್ರಸ್ಟಿಗಳಾದ ದಾಮೋದರ್ ಪೈ, ಜೋಯ್ ಜೆ. ಕರ್ವೆಲ್ಲೊ, ಉದಯ್ ಕುಮಾರ್ ಶೆಟ್ಟಿ ಪಡುಕೆರೆ, ಮಂಜುನಾಥ ಶೆಟ್ಟಿ ದೊಡ್ಮನೆ, ಡಾ.ರಾಜಾರಾಮ್ ಶೆಟ್ಟಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.