
ಉಡುಪಿ: ಜಿಲ್ಲಾ ಚೆಸ್ ಅಸೋಸಿಯೇಷನ್ ಹಾಗೂ ಕಲ್ಯ ದೇವರಾಯ ಶೆಣೈ ಸ್ಮಾರಕ ಚೆಸ್ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲಾ 3ನೇ ಚೆಸ್ ಚಾಂಪಿಯನ್‌ಷಿಪ್ ಮತ್ತು 17ನೇ ಕಲ್ಯ ದೇವರಾಯ ಶೆಣೈ ಸ್ಮರಣಾರ್ಥ ಚೆಸ್ ಸ್ಪರ್ಧೆ ಮಣಿಪಾಲದ ಮಾಧವ ಕೃಪ ಶಾಲೆಯಲ್ಲಿ ಈಚೆಗೆ ಜರುಗಿತು.
ಓಪನ್ ವಿಭಾಗದಲ್ಲಿ ನಿಹಾಲ್ ಎನ್. ಶೆಟ್ಟಿ ಚಾಂಪಿಯನ್ ಆದರು. ಅನೀಶ್ ಎಸ್.ಸಿ. ದ್ವಿತೀಯ ಸ್ಥಾನ ಹಾಗೂ ಚಿನ್ಮಯ ಎಸ್. ಭಟ್ ತೃತೀಯ ಸ್ಥಾನ ಗಳಿಸಿದರು. ಉತ್ತಮ ವೆಟರನ್ ಆಟಗಾರ ಪ್ರಶಸ್ತಿಯನ್ನು ರಾಮ ಶೇರಿಗಾರ್ ಹಾಗೂ ಉತ್ತಮ ಮಹಿಳಾ ಆಟಗಾರ್ತಿ ಪ್ರಶಸ್ತಿಯನ್ನು ಶಾನ್ವಿ ಎಸ್. ಬಳ್ಳಾಲ್ ಪಡೆದರು.
ಬೆಸ್ಟ್ ಅಕಾಡೆಮಿ ಪ್ರಶಸ್ತಿಯನ್ನು ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್ ಕಾಪು ಹಾಗೂ ಶ್ರೀ ಸಿದ್ಧಿವಿನಾಯಕ ಚೆಸ್ ಅಕಾಡೆಮಿ ಉಪ್ಪುಂದ ಪಡೆದುಕೊಂಡಿತು. ಜಿಲ್ಲೆಯ ವಿವಿಧ ಭಾಗಗಳಿಂದ ಒಟ್ಟು 195 ಆಟಗಾರರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು
ಏಳು ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಪರೀಕ್ಷಿತ್ ಬಿ. ಖಾರ್ವಿ ಪ್ರಥಮ ಹಾಗೂ ಸಾಮ್ರಾಟ್ ಬೆಲ್ಚಡ ದ್ವಿತೀಯ ಸ್ಥಾನ ಪಡೆದರು. ಬಾಲಕಿಯರ ವಿಭಾಗದಲ್ಲಿ ಅನೇಕರ ಎ. ಸಾಲಿಯಾನ್ ಪ್ರಥಮ ಸ್ಥಾನ ಗಳಿಸಿದರು.
ಒಂಬತ್ತು ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಪ್ರಮುಖ್ ಬಿ. ಪೂಜಾರಿ ಪ್ರಥಮ ಹಾಗೂ ಶ್ರೀನಿತ್ ಶೆಟ್ಟಿ ದ್ವಿತೀಯ ಸ್ಥಾನ ಪಡೆದರು. ಬಾಲಕಿಯರ ವಿಭಾಗದಲ್ಲಿ ಬ್ರಹ್ಮೀ ಪ್ರಿಯ ಪ್ರಥಮ ಮತ್ತು ಇಂಚರ ದ್ವಿತೀಯ ಸ್ಥಾನ ಗಳಿಸಿದರು.
11 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಅಥರ್ವ ಪ್ರಥಮ ಹಾಗೂ ಮಾಧ್ವ ವ್ಯಾಸರಾಜ್ ದ್ವಿತೀಯ ಸ್ಥಾನ ಪಡೆದರು. ಬಾಲಕಿಯರ ವಿಭಾಗದಲ್ಲಿ ನಿರ್ವಿ ಪೂಜಾರಿ ಪ್ರಥಮ ಮತ್ತು ಸಾನ್ವಿಕಾ ಎಸ್. ದ್ವಿತೀಯ ಸ್ಥಾನ ಗಳಿಸಿದರು. 13 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಉತ್ಸವ್ ಬಿ.ಪಿ. ಪ್ರಥಮ ಹಾಗೂ ಅವನೀಶ್ ಪ್ರಸಾದ್ ಕೆ. ದ್ವಿತೀಯ ಸ್ಥಾನ ಪಡೆದರು. ಬಾಲಕಿಯರ ವಿಭಾಗದಲ್ಲಿ ಅಲಿಶಾ ರೋಡ್ರಿಗಸ್ ಪ್ರಥಮ ಹಾಗೂ ಅಕ್ಷರ ಎ. ದ್ವಿತೀಯ ಸ್ಥಾನ ಗಳಿಸಿದರು.
15 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಕೃಷಾಂಗ್ ಪ್ರಭು ಪ್ರಥಮ ಹಾಗೂ ಅಂಬರೀಷ್ ಉಪಾಧ್ಯಾಯ ದ್ವಿತೀಯ ಸ್ಥಾನ ಪಡೆದರು. ಬಾಲಕಿಯರ ವಿಭಾಗದಲ್ಲಿ ಶ್ರೀಲತಾ ಎಸ್. ನಾಯಕ್ ಪ್ರಥಮ ಮತ್ತು ಸಾಥ್ವಿ ದ್ವಿತೀಯ ಸ್ಥಾನ ಗಳಿಸಿದರು. 17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಕಲಾಶ್ ಪಠಕ್ ಪ್ರಥಮ ಹಾಗೂ ಅಭಯ ಕಾಮತ್ ದ್ವಿತೀಯ ಸ್ಥಾನ ಪಡೆದರು. ಬಾಲಕಿಯರ ವಿಭಾಗದಲ್ಲಿ ಅದ್ವಿಕಾ ಪ್ರಭು ಪ್ರಥಮ ಮತ್ತು ಕೃತಿ ಎ.ಜಿ. ಖಾರ್ವಿ ದ್ವಿತೀಯ ಸ್ಥಾನ ಗಳಿಸಿದರು.
19 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ನಿಖಿಲ್ ವಿಕ್ರಂ ಕೆ.ಎಸ್. ಪ್ರಥಮ ಹಾಗೂ ದಕ್ಷ್ ಕೆ. ಜೋಗಿ ದ್ವಿತೀಯ ಸ್ಥಾನ ಪಡೆದರು. ಪ್ರತಿ ವಿಭಾಗದ ಮೊದಲ ಎರಡು ಸ್ಥಾನ ಪಡೆದ ಆಟಗಾರರು ರಾಜ್ಯ ಮಟ್ಟದ ಚೆಸ್ ಚಾಂಪಿಯನ್‌ಶಿಪ್‌ಗೆ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.