ADVERTISEMENT

ಪಡುಬಿದ್ರಿ | ಈ ವರ್ಷದಿಂದ ಎರ್ಮಾಳು ಕಂಬಳ: ರೋಹಿತ್ ಹೆಗ್ಡೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 4:54 IST
Last Updated 13 ಅಕ್ಟೋಬರ್ 2025, 4:54 IST
ಎರ್ಮಾಳು ಜನಾರ್ಧನ ದೇವಳದ ಆವರಣದಲ್ಲಿ ಎರ್ಮಾಳು ತೆಂಕ- ಬಡ ಜೋಡುಕರೆ ಕಂಬಳದ ಪೂರ್ವಭಾವಿ ಪ್ರಥಮ ಸಭೆಯಲ್ಲಿ ಕಂಬಳ ಸಮಿತಿಯ ಗೌರವಾಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ ಮಾತನಾಡಿದರು
ಎರ್ಮಾಳು ಜನಾರ್ಧನ ದೇವಳದ ಆವರಣದಲ್ಲಿ ಎರ್ಮಾಳು ತೆಂಕ- ಬಡ ಜೋಡುಕರೆ ಕಂಬಳದ ಪೂರ್ವಭಾವಿ ಪ್ರಥಮ ಸಭೆಯಲ್ಲಿ ಕಂಬಳ ಸಮಿತಿಯ ಗೌರವಾಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ ಮಾತನಾಡಿದರು   

ಪಡುಬಿದ್ರಿ: ಬಡಗೊಟ್ಟು ಬಾಕ್ಯಾರು 12 ಎಕರೆ ಜಾಗದಲ್ಲಿ ಈ ಬಾರಿ ಪ್ರಥಮ ಬಾರಿಗೆ 2025ರ ಫೆ. 28ಕ್ಕೆ ಎರ್ಮಾಳು ತೆಂಕ– ಬಡ ಜೋಡುಕರೆ ಕಂಬಳ ಆಯೋಜಿಸಲಾಗಿದೆ ಎಂದು ಕಂಬಳ ಸಮಿತಿಯ ಗೌರವಾಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ ತಿಳಿಸಿದರು.

ಅವರು ಭಾನುವಾರ ಎರ್ಮಾಳು ಜನಾರ್ದನ ದೇವಳದ ಆವರಣದಲ್ಲಿ ನಡೆದ ಕಂಬಳದ ಪೂರ್ವಭಾವಿ ಪ್ರಥಮ ಸಭೆಯಲ್ಲಿ ಮಾತನಾಡಿ, ಹಿಂದಿನ ಕಾಲದಲ್ಲಿ ಜೈನ ಮತದವರು ಕಂಬಳ ಮಾಡುತ್ತಿದ್ದ ಜಾಗ ಇದಾಗಿತ್ತು. ಊರ ಜನರಿಗೆ ತೊಂದರೆ ಬರದಂತೆ ನಾವು ವ್ಯಾಘ್ರ ಚಾಮುಂಡಿ ದೈವಕ್ಕೆ ಸೂಕ್ತ ನೆಲೆ ಕಲ್ಪಿಸಿ, ಇದೀಗ ಕಂಬಳ ನಡೆಸಲು ಉದ್ದೇಶಿಸಿದ್ದೇವೆ. ಇದೇ 22ರಂದು ಎರ್ಮಾಳು ತೆಂಕ– ಬಡ ಜೋಡುಕರೆ ಕಂಬಳ ಕರೆಗೆ ಭೂಮಿಪೂಜೆ ನೆರವೇರಿಸಲಾಗುವುದು ಎಂದು ತಿಳಿಸಿದರು.

ಕಂಬಳ ಜಾತ್ಯಾತೀತ ಜನಪದ ಕ್ರೀಡೆ. ಎರ್ಮಾಳು ತೆಂಕ– ಬಡ ನಾಗರಿಕರೆಲ್ಲರೂ ಒಟ್ಟಾಗಿ ಎರ್ಮಾಳು ಲಕ್ಷ್ಮೀಜನಾರ್ದನ ದೇವರ ಉತ್ಸವದಂತೆ ಅದ್ದೂರಿಯಾಗಿ ಆಯೋಜಿಸೋಣ ಎಂದರು.

ADVERTISEMENT

ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್ ರಾಜ್ ಎರ್ಮಾಳುಬೀಡು ಮಾತನಾಡಿ, ಎರ್ಮಾಳು ಬೀಡು ನೇತೃತ್ವದಲ್ಲಿ ಎರ್ಮಾಳಿನಲ್ಲಿ 1978ರಲ್ಲಿ ಕೊನೆಯ ಕಂಬಳ ನಡೆದಿತ್ತು. ನಮ್ಮ ಕಂಬಳ ಎಂಬ ಭಾವನೆಯಿಂದ ಇದನ್ನು ಯಶಸ್ವಿಗೊಳಿಸೋಣ ಎಂದರು.

ಎರ್ಮಾಳು ಕುದ್ರೊಟ್ಟು ಬ್ರಹ್ಮಬೈದರ್ಕಳ ಗರಡಿಯ ಪ್ರಧಾನ ಅರ್ಚಕ ಸದಾನಂದ ನಾಯ್ಗರು, ಎರ್ಮಾಳು ಜನಾರ್ದನ ಜನಕಲ್ಯಾಣ ಸಮಿತಿ ಅಧ್ಯಕ್ಷ ಸುರೇಶ್ ಜಿ. ಶೆಟ್ಟಿ, ಎರ್ಮಾಳು ಮಸೀದಿ ಅಧ್ಯಕ್ಷ ಸುಲೇಮಾನ್, ಜಿನರಾಜ್ ಎರ್ಮಾಳು, ವೈ. ಶಶಿಧರ ಶೆಟ್ಟಿ, ಯಶೋಧರ ಶೆಟ್ಟಿ ಮತ್ತಿತರರು ಅಭಿಪ್ರಾಯ ಮಂಡಿಸಿದರು.

ವೆಂಕಟೇಶ ನಾವಡ, ಬಾಲಚಂದ್ರ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಜಗಜೀವನ್ ಚೌಟ, ಭರತ್ ಕುಮಾರ್, ಗೋಪಾಲ ಶೆಟ್ಟಿ, ಜಯರಾಜ್ ಎರ್ಮಾಳು, ಸಂತೋಷ್ ಶೆಟ್ಟಿ ಬರ್ಪಾಣಿ, ಶಶಿಧರ ಶೆಟ್ಟಿ, ವಿವಿಧ ಜಾತಿ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು. ಶಿವಪ್ರಸಾದ್ ಶೆಟ್ಟಿ ಎಲ್ಲದಡಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.