ADVERTISEMENT

ಕಾರ್ಕಳ | ನಾರಾವಿ ರಕ್ಷಿತ್ ಜೈನ್ ಕೋಣಗಳು ಪ್ರಥಮ

ಮಿಯ್ಯಾರು ಲವ ಕುಶ ಜೋಡುಕರೆ ಕಂಬಳ ಸಂಪನ್ನ, 102 ಜೊತೆ ಕೋಣಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 6:49 IST
Last Updated 6 ಜನವರಿ 2026, 6:49 IST
<div class="paragraphs"><p>ಮಿಯ್ಯಾರು ಲವ ಕುಶ ಜೋಡುಕರೆ ಕಂಬಳದ ದೃಶ್ಯ</p></div>

ಮಿಯ್ಯಾರು ಲವ ಕುಶ ಜೋಡುಕರೆ ಕಂಬಳದ ದೃಶ್ಯ

   

ಕಾರ್ಕಳ: ತಾಲ್ಲೂಕಿನ ಮಿಯ್ಯಾರು ಕಂಬಳ ಸಮಿತಿ, ಮಂಗಳೂರು ನವೋದಯ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ನಡೆದ 22ನೇ ವರ್ಷದ ಮಿಯ್ಯಾರು ಲವ  ಕುಶ ಜೋಡುಕರೆ ಕಂಬಳ ಕೂಟದಲ್ಲಿ 205 ಜೊತೆ ಕೋಣಗಳು ಭಾಗವಹಿಸಿದ್ದವು.

ಕನೆಹಲಗೆ ವಿಭಾಗದಲ್ಲಿ 7 ಜೊತೆ, ಅಡ್ಡಹಲಗೆ 12 ಜೊತೆ, ಹಗ್ಗ ಹಿರಿಯ 18 ಜೊತೆ, ನೇಗಿಲು ಹಿರಿಯ 35 ಜೊತೆ, ಹಗ್ಗ ಕಿರಿಯ 31 ಜೊತೆ, ನೇಗಿಲು ಕಿರಿಯದಲ್ಲಿ 102 ಜೊತೆ ಕೋಣಗಳು ಭಾಗವಹಿಸಿದ್ದವು.

ADVERTISEMENT

ಫಲಿತಾಂಶ ವಿವರ

ಅಡ್ಡ ಹಲಗೆ: ಪ್ರಥಮ ನಾರಾವಿ ರಕ್ಷಿತ್ ಜೈನ್, ಹಲಗೆ ಮುಟ್ಟಿದವರು ಭಟ್ಕಳ ಹರೀಶ್, ದ್ವಿತೀಯ ಕೋಂಟಡ್ಕ ರೆಂಜಾಳ ಆಸ್ಟಿನ್ ಲಾರೆನ್ಸ್ ಮೆಂಡೊನ್ಸ, ಹಲಗೆ ಮುಟ್ಟಿದವರು ಉಳ್ಳೂರು ಕಂದಾವರ ಗಣೇಶ್. 

ಹಗ್ಗ ಹಿರಿಯ: ಪ್ರಥಮ ಮುಡಾರ್ ಹಚ್ಚೊಟ್ಟು ಫ್ಲೋರ ನಿವಾಸ ರೋಹನ್ ರಂಜಿತ್ ಫೆರ್ನಾಂಡಿಸ್, ಓಡಿಸಿದವರು ಬೈಂದೂರು ವಿಶ್ವನಾಥ ದೇವಾಡಿಗ, ದ್ವಿತೀಯ ಮಿಜಾರ್ ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ, ಓಡಿಸಿದವರು ಮಿಜಾರ್ ಅಶ್ವಥಪುರ ಶ್ರೀನಿವಾಸ ಗೌಡ.  ಹಗ್ಗ ಕಿರಿಯ: ಪ್ರಥಮ: ಹೊಸ್ಮಾರ್ ಸೂರ್ಯಶ್ರೀ ಜ್ಯೋತಿ ಸುರೇಶ್ ಶೆಟ್ಟಿ, ಓಡಿಸಿದವರು ಕಡಂದಲೆ ಮೂಡಾಯಿಬೆಟ್ಟು ರೋಹಿತ್ ಪಾಣಾರ, ದ್ವಿತೀಯ ಮಿಯ್ಯಾರು ಹಿನಪಾಡಿ ಬ್ರಿಜೇಶ್ ಪಡಿವಾಳ್ ‘ಎ’, ಓಡಿಸಿದವರು ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ. 

ನೇಗಿಲು ಹಿರಿಯ: ಪ್ರಥಮ ಬೋಳದಗುತ್ತು ಸತೀಶ್ ಶೆಟ್ಟಿ ‘ಎ’, ಓಡಿಸಿದವರು ಬೈಂದೂರು ವಿಶ್ವನಾಥ ದೇವಾಡಿಗ, ದ್ವಿತೀಯ ನೂಜಿಪ್ಪಾಡಿ ಚಂದ್ರಶೇಖರ ಹೊಳ್ಳ ‘ಎ’, ಓಡಿಸಿದವರು ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ. ನೇಗಿಲು ಕಿರಿಯ: ಪ್ರಥಮ ಕಾರ್ಕಳ ಬಂಡಿಮಠ ಸಿದ್ಧನಾಯಕಬೆಟ್ಟು ಕೋಡಿಮನೆ ಅದ್ವಿಕ್ ಅಶೋಕ್ ಶೆಟ್ಟಿ ‘ಎ’, ಓಡಿಸಿದವರು ಬೈಂದೂರು ವಿಶ್ವನಾಥ ದೇವಾಡಿಗ, ದ್ವಿತೀಯ ಶ್ರೀಶಂಕರ ಮೂಡುಪೆರಾರ ಈಶ್ವರಕಟ್ಟೆ ಪ್ರೇರಣ ಪ್ರತಾಪ್ ಭಂಡಾರಿ, ಓಡಿಸಿದವರು ಮಂದಾರ್ತಿ ಶಿರೂರು ಮುದ್ದುಮನೆ ಭರತ್ ನಾಯ್ಕ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.