ADVERTISEMENT

ಕಾಂತಾವರ ಕನ್ನಡ ಸಂಘದ ದತ್ತಿ ಪ್ರಶಸ್ತಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2023, 5:47 IST
Last Updated 17 ಫೆಬ್ರುವರಿ 2023, 5:47 IST
ಭಾಸ್ಕರ ಆಚಾರ್ಯ
ಭಾಸ್ಕರ ಆಚಾರ್ಯ   

ಮೂಡುಬಿದಿರೆ: ಕಾಂತಾವರ ಕನ್ನಡ ಸಂಘದ ಮೂರು ದತ್ತಿ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ.

ಉಡುಪಿ ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಸತೀಶ್ ಕುಮಾರ್ ಕೆಮ್ಮಣ್ಣು ಅವರ ಹೆಸರಿನ ‘ಗಮಕ ಕಲಾ ಪ್ರವಚನ’ ದತ್ತಿ ಪ್ರಶಸ್ತಿಗೆ ಗಮಕ ವಾಚನಕಾರ ಡಾ.ರಾಘವೇಂದ್ರ ರಾವ್ ಪಡುಬಿದ್ರಿ, ಉಡುಪಿಯ ಗಮಕಿ ಯಾಮಿನಿ ಭಟ್ ಅವರು ಸ್ಥಾಪಿಸಿದ ‘ಗಮಕ ಕಲಾ ವಾಚನ’ ದತ್ತಿ ಪ್ರಶಸ್ತಿಗೆ ಮಂಜುಳಾ ಸುಬ್ರಹ್ಮಣ್ಯ ಭಟ್ ಮಂಚಿ, ಕಾರ್ಕಳದ ಶಿಲ್ಪಿ ಕೆ. ಶಾಮರಾಯ ಆಚಾರ್ಯ ಅವರ ಹೆಸರಿನ ‘ಶಿಲ್ಪಕಲಾ’ ದತ್ತಿ ಪ್ರಶಸ್ತಿಗೆ ಶಿಲ್ಪಿ ಬಿ.ಎಸ್.ಭಾಸ್ಕರ ಆಚಾರ್ಯ ಕಾರ್ಕಳ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಗಳು ತಲಾ ₹ 10 ಸಾವಿರ ನಗದು, ತಾಮ್ರ ಪತ್ರ ಒಳಗೊಂಡಿವೆ. ಫೆ.26ರಂದು ಕಾಂತಾವರದಲ್ಲಿ ನಡೆಯುವ ಮುದ್ದಣ ಕಾವ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಜೊತೆ ಈ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕಾಂತಾವರ ಕನ್ನಡ ಸಂಘದ
ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.