ADVERTISEMENT

ಕಾರ್ಕಳ: ಭುವನೇಂದ್ರ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2025, 13:17 IST
Last Updated 22 ಏಪ್ರಿಲ್ 2025, 13:17 IST
ಕಾರ್ಕಳ ಭುವನೇಂದ್ರ ಕಾಲೇಜಿನ ಕ್ರೀಡಾಂಗಣದಲ್ಲಿ 2 ದಿನಗಳ ಪ್ರೀಮಿಯರ್‌ ಲೀಗ್ ಕ್ರಿಕೆಟ್ ಟೂರ್ನಿ ನಡೆಯಿತು
ಕಾರ್ಕಳ ಭುವನೇಂದ್ರ ಕಾಲೇಜಿನ ಕ್ರೀಡಾಂಗಣದಲ್ಲಿ 2 ದಿನಗಳ ಪ್ರೀಮಿಯರ್‌ ಲೀಗ್ ಕ್ರಿಕೆಟ್ ಟೂರ್ನಿ ನಡೆಯಿತು   

ಕಾರ್ಕಳ: ಇಲ್ಲಿನ ಭುವನೇಂದ್ರ ಕಾಲೇಜಿನ ಕ್ರೀಡಾಂಗಣದಲ್ಲಿ 2 ದಿನಗಳ ಭುವನೇಂದ್ರ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ ನಡೆಯಿತು.

ಕಾಲೇಜಿನ ಹಿರಿಯ ವಿದ್ಯಾರ್ಥಿ ವಿಖ್ಯಾತ್ ಶೆಟ್ಟಿ ಅವರು ಟೂರ್ನಿಗೆ ಚಾಲನೆ ನೀಡಿ, ಶೈಕ್ಷಣಿಕ ಜೀವನದ ಮಾನಸಿಕ ಸಿದ್ಧತೆಗೆ ಕ್ರೀಡೆಯ ಅಗತ್ಯವಿದೆ. ಎಲ್ಲ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಭಾಗವಹಿಸಬೇಕು ಎಂದರು.

ಕಾರ್ಕಳ ಪುರಸಭೆಯ ಪ್ರದೀಪ್ ರಾಣೆ ಮಾತನಾಡಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಎ.ಕೋಟ್ಯಾನ್ ಮಾತನಾಡಿ, ಕ್ರೀಡೆಯು ಸಂಘಟನೆಯನ್ನು ಪ್ರೋತ್ಸಾಹಿಸುತ್ತದೆ. ಶಿಕ್ಷಣದ ಶಿಸ್ತಿನ ಜತೆಗೆ ಅದರಾಚೆಗಿನ ಪಠ್ಯೇತರ ಚಟುವಟಿಕೆಗಳು ಯಾವಾಗಲೂ ನೆನಪಿನಲ್ಲಿ ಉಳಿಯುತ್ತವೆ ಎಂದರು.

ಎಲ್ಲ ತಂಡದ ನಾಯಕರಿಗೆ ಜೆರ್ಸಿಯನ್ನು ಹಸ್ತಾಂತರಿಸಲಾಯಿತು. ಸಹ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ನಂದಕಿಶೋರ್ ಭಾಗವಹಿಸಿದ್ದರು.

ಕ್ರೀಡಾಧಿಕಾರಿ ನವೀನ್ ಚಂದ್ರ ಸ್ವಾಗತಿಸಿದರು. ಶ್ವೇತಾ ನಿರೂಪಿಸಿದರು. ಉಪನ್ಯಾಸಕ ಶಂಕರ್ ಕುಡ್ವ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.