ADVERTISEMENT

ಕಾರ್ಕಳ: ನಿಟ್ಟೆ ಶಾಲೆಯಲ್ಲಿ ವಿಶ್ವಕರ್ಮ ಪೂಜೆ

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ, ಸಾಧಕರಿಗೆ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 5:20 IST
Last Updated 26 ಸೆಪ್ಟೆಂಬರ್ 2025, 5:20 IST
ಕಾರ್ಕಳ ತಾಲ್ಲೂಕಿನ ನಿಟ್ಟೆ ವಿಶ್ವಕರ್ಮ ಬ್ರಾಹ್ಮಣ ಸೇವಾ ಸಮಿತಿಯ ವತಿಯಿಂದ ನಡೆದ ವಿಶ್ವಕರ್ಮ ಪೂಜೆಯಲ್ಲಿ ಸಾಧಕರನ್ನು ಪುರಸ್ಕರಿಸಲಾಯಿತು
ಕಾರ್ಕಳ ತಾಲ್ಲೂಕಿನ ನಿಟ್ಟೆ ವಿಶ್ವಕರ್ಮ ಬ್ರಾಹ್ಮಣ ಸೇವಾ ಸಮಿತಿಯ ವತಿಯಿಂದ ನಡೆದ ವಿಶ್ವಕರ್ಮ ಪೂಜೆಯಲ್ಲಿ ಸಾಧಕರನ್ನು ಪುರಸ್ಕರಿಸಲಾಯಿತು    

ಕಾರ್ಕಳ: ತಾಲ್ಲೂಕಿನ ನಿಟ್ಟೆ ವಿಶ್ವಕರ್ಮ ಬ್ರಾಹ್ಮಣ ಸೇವಾ ಸಮಿತಿಯ ವತಿಯಿಂದ ಕಾಳಿಕಾಂಬಾ ಮಹಿಳಾ ಸೇವಾ ಸಮಿತಿ ಹಾಗೂ ವಿಶ್ವಕರ್ಮ ಯುವವೇದಿಕೆ ನಿಟ್ಟೆ ಸಹಭಾಗಿತ್ವದಲ್ಲಿ ನಿಟ್ಟೆ ಪ್ರಾಥಮಿಕ ಶಾಲೆಯಲ್ಲಿ ವಿಶ್ವಕರ್ಮ ಪೂಜೆ ನಡೆಯಿತು.

ಬೋಳ ಮಂಜುನಾಥ ಪುರೋಹಿತರು ಧಾರ್ಮಿಕ ಪೂಜಾ ವಿಧಿ ನಡೆಸಿದರು. ನಿಟ್ಟೆ ಅಟಲ್ ಇನ್ಕ್ಯುಬೇಷನ್ ಸೆಂಟರ್‌ನ ಸಿಇಒ ಅನಂತಪದ್ಮನಾಭ ಆಚಾರ್ಯ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಅಧ್ಯಕ್ಷ ಹರ್ಷವರ್ಧನ್ ಆಚಾರ್ಯ ನಿಟ್ಟೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನಾವು ವಸ್ತುಗಳನ್ನು ಪ್ರೀತಿಸುತ್ತಿದ್ದೇವೆ, ಜನರನ್ನು ಉಪಯೋಗಿಸಿಕೊಳ್ಳುತ್ತಿದ್ದೇವೆ ಎನ್ನಿಸುತ್ತದೆ. ವಸ್ತುಗಳನ್ನು ಪ್ರೀತಿಸುವುದನ್ನು ಬಿಟ್ಟು ಜನರನ್ನು ಪ್ರೀತಿಸುವುದನ್ನು ಕಲಿಯಬೇಕು. ನಿಟ್ಟೆಯ ಸಂಘ ಈ ದಾರಿಯಲ್ಲಿ ನಡೆಯುತ್ತಿದೆ. ಈ ಕಾರಣಕ್ಕೆನಿಟ್ಟೆ ವಿಶ್ವಕರ್ಮ ಸಂಘ ವಿಭಿನ್ನವಾಗಿದೆ ಎಂದರು.

ADVERTISEMENT

ಸಮಿತಿಯ ವತಿಯಿಂದ ಸಮಾಜದ  50 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ದ್ವಿತೀಯ ಪಿ.ಯು.ಸಿ.ಯಲ್ಲಿ ಉತ್ತಮ ಅಂಕ ಗಳಿಸಿದ ವಿನುತಾ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಸೌಜನ್ಯಾ ಅವರಿಗೆ ವಿದ್ಯಾರತ್ನ ಪ್ರಶಸ್ತಿ, ಉಡುಪಿ ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕ ವಿಜಯ್ ಕುಮಾರ್ ಹಾಗೂ ರೂಪಾ ವಸುಂಧರ ಆಚಾರ್ಯ ಅವರಿಗೆ ಪ್ರೇರಣಾ ರತ್ನ ಪ್ರಶಸ್ತಿ, 50 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ ಪುರಸ್ಕರಿಸಲಾಯಿತು.

ವಿಶ್ವಕರ್ಮ ಬ್ರಾಹ್ಮಣ ಸೇವಾ ಸಮಿತಿಯ ಗೌರವಾಧ್ಯಕ್ಷ ಜಯಾನಂದ ಆಚಾರ್ಯ ಸ್ವಾಗತಿಸಿದರು. ಕಾರ್ಯದರ್ಶಿ ಮುರಳೀಧರ ಆಚಾರ್ಯ ವಾರ್ಷಿಕ ವರದಿ ವಾಚಿಸಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಆಚಾರ್ಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸುಮಾ ಕೆ. ಬಿ., ನೆಕ್ಲಾಜೆ ಕಾಳಿಕಾಂಬಾ ದೇವಸ್ಥಾನದ ಮೊಕ್ತೇಸರ ರಾಮಚಂದ್ರ ಆಚಾರ್ಯ, ರವಿ ಆಚಾರ್ಯ, ಪ್ರಮುಖರಾದ ದಿನೇಶ್ ಆಚಾರ್ಯ, ನವೀನ್ ನಾಯಕ್, ನಿಟ್ಟೆ. ನಡಿಮನೆ ಬಿ. ಕೆ. ನಾಯಕ್,  ಸದಾನಂದ ಆಚಾರ್ಯ ನೂರಾಲ್ ಬೆಟ್ಟು, ಲಕ್ಷ್ಮಣ ಆಚಾರ್ಯ, ವತ್ಸಲಾ ಉಮೇಶ, ಆಚಾರ್ಯ, ವೀಣಾ ದಿವಾಕರ ಆಚಾರ್ಯ, ಪ್ರಮೀಳಾ ಜಲಂಧರ ಆಚಾರ್ಯ, ರಕ್ಷಿತಾ ಸುನಿಲ್ ಆಚಾರ್ಯ, ಆಶಾ ಜಯಾನಂದ ಆಚಾರ್ಯ, ಪ್ರದೀಪ್ ಆಚಾರ್ಯ ಪರಪ್ಪಾಡಿ, ಸುಧೀರ್ ಆಚಾರ್ಯ ಉಪಸ್ಥಿತರಿದ್ದರು.

ಪ್ರಸಾದ್ ಆಚಾರ್ಯ, ಶ್ರೇಯಾ, ಸೃಜಾ ನಿರೂಪಿಸಿದರು. ಕೋಶಾಧಿಕಾರಿ ಶ್ರೀಧರ ಆಚಾರ್ಯ ಕೆಮ್ಮಣ್ಣು ವಂದಿಸಿದರು.

ಯುವ ಕಲಾವಿದ ಪ್ರದೀಪ್ ಆಚಾರ್ಯ ಕೆಮ್ಮಣ್ಣು ಅವರ ಮೆಲೋಡಿ ಮ್ಯೂಸಿಕಲ್ ತಂಡ ಹಾಗೂ ಸಮಾಜ ಬಾಂಧವರಿಂದ ಮನರಂಜನಾ ಕಾರ್ಯಕ್ರಮಗಳು ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.