ADVERTISEMENT

ಕಾರ್ಕಳ: ರೋಟರಿ ಕ್ಲಬ್‌ನಿಂದ ಶಿಕ್ಷಕರಿಗೆ ಗೌರವ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 5:44 IST
Last Updated 22 ಸೆಪ್ಟೆಂಬರ್ 2025, 5:44 IST
ಕಾರ್ಕಳ ರೋಟರಿ ಕ್ಲಬ್ ಆಯೋಜಿಸಿದ ಶಿಕ್ಷಕರ ದಿನಾಚರಣೆಯಲ್ಲಿ ಶಿಕ್ಷಕರನ್ನು ಗೌರವಿಸಲಾಯಿತು
ಕಾರ್ಕಳ ರೋಟರಿ ಕ್ಲಬ್ ಆಯೋಜಿಸಿದ ಶಿಕ್ಷಕರ ದಿನಾಚರಣೆಯಲ್ಲಿ ಶಿಕ್ಷಕರನ್ನು ಗೌರವಿಸಲಾಯಿತು   

ಕಾರ್ಕಳ: ಇಲ್ಲಿನ ರೋಟರಿ ಕ್ಲಬ್ ಆಯೋಜಿಸಿದ ಶಿಕ್ಷಕರ ದಿನಾಚರಣೆಯಲ್ಲಿ ಶಿಕ್ಷಕರನ್ನು ಗೌರವಿಸಲಾಯಿತು.

ಶಿರ್ಲಾಲು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ನಾರಾಯಣ ಪೂಜಾರಿ, ಎಸ್‌ವಿಟಿ ಪ್ರೌಢಶಾಲೆಯ ಶಿಕ್ಷಕ ದೇವದಾಸ್ ಕೆರೆಮನೆ, ಕಲ್ಯಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಪ್ರಮೀಳಾ, ಕುಕ್ಕುಂದೂರು ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ವಿದ್ಯಾ ಶಶಿಧರ್ ಭಟ್ ಅವರನ್ನು ಗೌರವಿಸಲಾಯಿತು.

ರೋಟರಿ ಕ್ಲಬ್ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಧಾಕರ್ ಶೆಟ್ಟಿ, ಆ್ಯನ್ಸ್ ಕ್ಲಬ್ ಚೇರ್ಮನ್ ವೃಂದಾ ಹರಿಪ್ರಕಾಶ್, ಅಧ್ಯಕ್ಷೆ ಜಯಂತಿ ಆನಂದ ನಾಯಕ್, ಜ್ಯೋತಿ ಪದ್ಮನಾಭ್, ವಸಂತ್ ಎಂ, ಹರ್ಷಿಣಿ ವಿಜಯರಾಜ್, ಮಮತಾ ಶೆಟ್ಟಿ, ಜ್ಯೋತಿ ಶೆಟ್ಟಿ, ವಿಜಯಶ್ರಿ ರಾವ್, ಶೈಲೇಂದ್ರ ರಾವ್, ಕಾರ್ಯದರ್ಶಿ ಚೇತನ್ ನಾಯಕ್ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.