ADVERTISEMENT

ಮಹಿಳೆ ಸಾವು: ಕಾರ್ಕಳದ ಮೂವರು ವೈದ್ಯರ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 7:48 IST
Last Updated 1 ಜನವರಿ 2026, 7:48 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

– ಐಸ್ಟಾಕ್ ಚಿತ್ರ

ಕಾರ್ಕಳ: ಮಹಿಳೆಯೊಬ್ಬರು ಸಾವಿಗೀಡಾದ ಘಟನೆಗೆ ಸಂಬಂಧಿಸಿ ಉಡುಪಿ ಜಿಲ್ಲಾ ಸರ್ಜನ್ ನೀಡಿದ ವರದಿಯ ಆಧಾರದಲ್ಲಿ ಆಸ್ಪತ್ರೆಯ ಮೂವರು ವೈದ್ಯರ ವಿರುದ್ಧ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ತಾಲ್ಲೂಕಿನ ಸಾಣೂರಿನ ಝುಬೇದಾ (52) ಕಳೆದ ವರ್ಷ ಮೇ 10ರಂದು ಹೊಟ್ಟೆನೋವಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಹೋಗಿದ್ದು ಅವರಿಗೆ ಡ್ರಿಪ್ಸ್ ಹಾಕಲಾಗಿತ್ತು. ಪರಿಶೀಲಿಸುವಂತೆ ಝುಬೇದಾ ಮಗಳು ಮುಬೀನಾ ಕೇಳಿಕೊಂಡರೂ ವೈದ್ಯರು ಬರಲಿಲ್ಲ. ನಂತರ ಡಾ.ನಾಗರತ್ನ ಪರಿಶೀಲಿಸಿ ಝುಬೇದಾ ಜೀವಕ್ಕೆ ಅಪಾಯ ಇದ್ದು ಕೂಡಲೇ ಆಪರೇಷನ್‌ ಮಾಡಿಸಬೇಕು ಎಂದಿದ್ದರು. ಆಪರೇಷನ್ ಥಿಯೇಟರ್‌ಗೆ ಕರೆದೊಯ್ಯುವ ಸಂದರ್ಭದಲ್ಲಿ ಡಾ.ನಾಗರತ್ನ, ಡಾ. ರೆಹಮತ್ ಉಲ್ಲಾ ಹಾಗೂ ಡಾ.ತುಷಾರ ಇದ್ದರು. ಸ್ವಲ್ಪ ಹೊತ್ತಿನ ನಂತರ ಝುಬೇದಾ ಮೃತಪಟ್ಟಿರುವುದಾಗಿ ರಹಮತ್ ಉಲ್ಲಾ ತಿಳಿಸಿದ್ದರು’ ಎಂದು ದೂರಲಾಗಿತ್ತು.

‘ವೈದ್ಯರ ನಿರ್ಲಕ್ಷ್ಯದಿಂದ ಝುಬೇದಾ ಸಾವಿಗೀಡಾಗಿದ್ದಾರೆ ಎಂದು ಆರೋಪಿಸಿ ಕಾರ್ಕಳ ನಗರ ಠಾಣೆಯಲ್ಲಿ ಮುಬೀನಾ ಪ್ರಕರಣ ದಾಖಲಿಸಿದ್ದರು.

ಪ್ರಕರಣದ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ ಜಿಲ್ಲಾಧಿಕಾರಿ ಸೂಚಿಸಿದ್ದರು. ಪರಿಶೀಲನೆ ನಡೆಸಿದ ವೈದ್ಯಾಧಿಕಾರಿ ಡಾ. ಎಚ್‌. ಅಶೋಕ ನೀಡಿರುವ ವರದಿಯಲ್ಲಿ ವೈದ್ಯರ ನಿರ್ಲಕ್ಷ್ಯ ಸಾಬೀತಾಗಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.