ADVERTISEMENT

ಮುಸ್ಲಿಂ ವ್ಯಾಪಾರಿಗಳ ಅನುಪಸ್ಥಿತಿಯಲ್ಲಿ ಕಾಪು ಜಾತ್ರೆ ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2022, 12:25 IST
Last Updated 23 ಮಾರ್ಚ್ 2022, 12:25 IST
ಕಾಪು ಮಾರಿಗುಡಿ ಜಾತ್ರೆ ದೃಶ್ಯ
ಕಾಪು ಮಾರಿಗುಡಿ ಜಾತ್ರೆ ದೃಶ್ಯ   

ಕಾಪು (ಉಡುಪಿ ಜಿಲ್ಲೆ): ಪ್ರಸಿದ್ಧ ಕಾಪು ಮಾರಿಗುಡಿ ಜಾತ್ರೆಯು ಮೊದಲ ಬಾರಿಗೆ ಮುಸ್ಲಿಂ ವ್ಯಾಪಾರಿಗಳ ಅನುಪಸ್ಥಿತಿಯಲ್ಲಿ ಬುಧವಾರ ಮುಕ್ತಾಯವಾಯಿತು.

ವ್ಯಾಪಾರ ಮಾಡಲು ಅನುಮತಿ ನೀಡುವಂತೆ ಜಾತ್ರೆ ಆರಂಭವಾಗುವ ಕೊನೆಯ ಕ್ಷಣದವರೆಗೂ ಮುಸ್ಲಿಂ ವ್ಯಾಪಾರಿಗಳು ಮಾಡಿದ ಮನವಿಗೆ ದೇವಸ್ಥಾನದ ಆಡಳಿತ ಮಂಡಳಿಯಿಂದ ಒಪ್ಪಿಗೆ ಸಿಗಲಿಲ್ಲ. ಪರಿಣಾಮ ಮುಸ್ಲಿಂ ವ್ಯಾಪಾರಿಗಳು ಜಾತ್ರೆಯಿಂದ ಹೊರಗುಳಿಯಬೇಕಾಯಿತು.

ದೇವಸ್ಥಾನದ ಆವರಣದಲ್ಲಿ ಮುಸ್ಲಿಮರ ಬದಲಾಗಿ ಹಿಂದೂ ವ್ಯಾಪಾರಿಗಳೇ ಕೋಳಿ ಮಾರಾಟ ಮಳಿಗೆ, ಹೂ ಹಣ್ಣು, ಐಸ್‌ಕ್ರೀಂ, ಜ್ಯೂಸ್‌ ಕೇಂದ್ರಗಳನ್ನು ತೆರೆದಿದ್ದರು. ಎಲ್ಲ ಮಳಿಗೆಗಳಿಗೂ ಕೇಸರಿ ಧ್ವಜಗಳನ್ನು ಹಾಕಲಾಗಿತ್ತು.

ADVERTISEMENT

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.