
ಪ್ರಜಾವಾಣಿ ವಾರ್ತೆ
ಪಡುಬಿದ್ರಿ (ಉಡುಪಿ): ಅಬುಧಾಬಿಯಲ್ಲಿ ನಡೆದ ಬಿಗ್ ಟಿಕೆಟ್ ಲಕ್ಕಿ ಡ್ರಾದಲ್ಲಿ ಕಟಪಾಡಿ ಮಟ್ಟುವಿನ ನಿವಾಸಿ ಶಾಂತನು ಶೆಟ್ಟಿಗಾರ್ ಅವರಿಗೆ 2 ಕೋಟಿ ದಿರ್‌ಹಂ (₹49 ಕೋಟಿ) ಬಹುಮಾನ ಒಲಿದಿದೆ.
ಈ ಡ್ರಾದಲ್ಲಿ ಜಾಕ್‌ಪಾಟ್ ಜೊತೆಗೆ ಹಲವು ಬಹುಮಾನಗಳೂ ಸೇರಿದ್ದವು. ಐದು ಮಂದಿಗೆ ತಲಾ 10 ಲಕ್ಷ ದಿರ್‌ಹಂ ಬಹುಮಾನದ ಜೊತೆಗೆ ಐಷಾರಾಮಿ ವಾಹನ ನೀಡಲಾಯಿತು.
ಸ್ನೇಹಿತರೊಂದಿಗೆ ಸೇರಿ ಟಿಕೆಟ್ ಖರೀದಿಸಿದ್ದು, ಬಹುಮಾನ ಮೊತ್ತವನ್ನು ಸ್ನೇಹಿತರೊಂದಿಗೆ ಹಂಚಿ ಕೊಳ್ಳುವುದಾಗಿ ಶಾಂತನು ನೇರ ಪ್ರಸಾರದಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.