ADVERTISEMENT

ಕೋಟ: ಹಿರೇಮಹಾಲಿಂಗೇಶ್ವರನ ಮನ್ಮಹಾರಥೋತ್ಸವ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 1:52 IST
Last Updated 2 ಫೆಬ್ರುವರಿ 2026, 1:52 IST
ಕೋಟ ಹಿರೇ ಮಹಾಲಿಂಗೇಶ್ವರ ದೇವಸ್ಥಾನದ ಮನ್ಮಹಾರಥೋತ್ಸವ ನಡೆಯಿತು
ಕೋಟ ಹಿರೇ ಮಹಾಲಿಂಗೇಶ್ವರ ದೇವಸ್ಥಾನದ ಮನ್ಮಹಾರಥೋತ್ಸವ ನಡೆಯಿತು   

ಕೋಟ (ಬ್ರಹ್ಮಾವರ): ಇಲ್ಲಿನ ಮಹತೋಭಾರ ಹಿರೇಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಮನ್ಮಹಾರಥೋತ್ಸವ ಭಾನುವಾರ ವಿಜೃಂಭಣೆಯಿಂದ ಜರುಗಿತು.

ಬೆಳಿಗ್ಗೆ ರಥಾರೋಹಣ, ಉತ್ಸವ ಬಲಿ, ಸಂಜೆ ದೇವಸ್ಥಾನದಿಂದ ಕೋಟ ಬಸ್ ನಿಲ್ದಾಣದವರೆಗೆ ಮೆರವಣಿಗೆಯೊಂದಿಗೆ ಮನ್ಮಹಾರಥೋತ್ಸವ ನಡೆಯಿತು. ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ರಥೋತ್ಸವದಲ್ಲಿ ಕೀಲು ಕುದುರೆ, ಡೊಳ್ಳು ಕುಣಿತ, ಚೆಂಡೆ ವಾದನ, ಕುಣಿತ ಭಜನೆ, ವಿವಿಧ ಬಗೆಯ ಗೊಂಬೆಗಳು, ಸುಡುಮದ್ದು ಪ್ರದರ್ಶನ ಮೆರುಗು ನೀಡಿದವು.

ADVERTISEMENT

ದೇವಸ್ಥಾನದ ಅಧ್ಯಕ್ಷ ಕೆ. ಅನಂತಪದ್ಮನಾಭ ಐತಾಳ, ಸದಸ್ಯರಾದ ಶ್ರೀನಿವಾಸ ಅಡಿಗ, ಭಾಸ್ಕರ ಶೆಟ್ಟಿ, ಉಮೇಶ ಪೂಜಾರಿ, ದಿನೇಶ ದೇವಾಡಿಗ, ಶ್ರೀಲಕ್ಷ್ಮೀ ಪ್ರಭು, ಅರ್ಚಕರಾದ ಗಣೇಶ ಭಟ್, ರಾಜೇಂದ್ರ ಅಡಿಗ, ಸದಾಶಿವ ಅಡಿಗ, ಅಮೃತೇಶ್ಚರಿ ದೇವಸ್ಥಾನದ ಅಧ್ಯಕ್ಷ ಆನಂದ ಸಿ. ಕುಂದರ್, ಕೋಟ ಮಿತ್ರವೃಂದದ ಆನಂದ ದೇವಾಡಿಗ, ಭಕ್ತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.