ADVERTISEMENT

ಕೋಟ| ಮಕ್ಕಳನ್ನು ಸುಸಂಸ್ಕೃತ, ಪರಿಸರ ಸ್ನೇಹಿಯಾಗಿ ಬೆಳೆಸಿ: ಸುಜಾತ ಬಾಯರಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 4:41 IST
Last Updated 15 ಜನವರಿ 2026, 4:41 IST
ಶಾಲಾ ಹಸ್ತಪ್ರತಿ ‘ವಲ್ಲರಿ’ಯನ್ನು ನಿವೃತ್ತ ಪ್ರಾಂಶುಪಾಲ ರಾಘವೇಂದ್ರ ಭಟ್ ಬಿಡುಗಡೆಗೊಳಿಸಿದರು
ಶಾಲಾ ಹಸ್ತಪ್ರತಿ ‘ವಲ್ಲರಿ’ಯನ್ನು ನಿವೃತ್ತ ಪ್ರಾಂಶುಪಾಲ ರಾಘವೇಂದ್ರ ಭಟ್ ಬಿಡುಗಡೆಗೊಳಿಸಿದರು   

ಕೋಟ (ಬ್ರಹ್ಮಾವರ): ಮಕ್ಕಳನ್ನು ಸುಸಂಸ್ಕೃತರನ್ನಾಗಿಸುವುದರ ಜೊತೆಗೆ ಆರೋಗ್ಯವಂತರು, ಪರಿಸರ ಸ್ನೇಹಿಯಾಗಿ ಬೆಳೆಸಿ ಎಂದು ಹಿರಿಯ ವಿದ್ಯಾರ್ಥಿ ಸುಜಾತ ಬಾಯರಿ ಹೇಳಿದರು.

ಕೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದ ವಲ್ಲರಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮಕ್ಕಳನ್ನು ಜಂಕ್‌ಫುಡ್‌ಗಳಿಂದ ರಕ್ಷಿಸಿ. ಅವರ ಜನ್ಮದಿನವನ್ನು ಮನೆ ವಠಾರದಲ್ಲಿ ಗಿಡ ನೆಟ್ಟು ಬೆಳೆಸಿ ಆಚರಿಸಿ. ಮೊಬೈಲ್‌ ಗೀಳಿನಿಂದ ರಕ್ಷಿಸಿ ವಿದ್ಯಾರ್ಥಿ ಜೀವನವನ್ನು ಅರ್ಥಪೂರ್ಣವಾಗಿಸಲು ಪೋಷಕರು ವಿಶೇಷ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.

ಬಹುಮಾನ ವಿತರಣೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕಿ ಪುಷ್ಪಲತಾ ಅವರನ್ನು ಗೌರವಿಸಲಾಯಿತು. ಶಾಲೆಯ ಹಸ್ತಪ್ರತಿ ‘ವಲ್ಲರಿ’ಯನ್ನು ನಿವೃತ್ತ ಪ್ರಾಂಶುಪಾಲ ರಾಘವೇಂದ್ರ ಭಟ್ ಬಿಡುಗಡೆಗೊಳಿಸಿದರು. ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ ಕುಂದರ್ ಬಾರಿಕೆರೆ ಅಧ್ಯಕ್ಷತೆ ವಹಿಸಿದ್ದರು.

ADVERTISEMENT

ರಂಗಯ್ಯ ಅಡಿಗ, ಭಾರತಿ ಪೂಜಾರಿ, ಉದಯ ಗಾಣಿಗ, ವಿದ್ಯಾರ್ಥಿ ನಾಯಕರಾದ ನಿತೀಶ್, ಅನುಜ್ಞಾ ಭಾಗವಹಿಸಿದ್ದರು. ಗೌರವ ಶಿಕ್ಷಕಿಯರಾದ ಶಾರದಾ, ಸುಮಾ, ಶ್ರೀದೇವಿ, ಮಾನಸ ದತ್ತಿನಿಧಿ, ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಮುಖ್ಯಶಿಕ್ಷಕಿ ಪುಷ್ಪಾವತಿ ಹೊಳ್ಳ ವರದಿ ವಾಚಿಸಿದರು. ಎಸ್‌ಡಿಎಂಸಿ ಅಧ್ಯಕ್ಷೆ ಮಹಾಲಕ್ಷ್ಮೀ ಸೋಮಯಾಜಿ ಸ್ವಾಗತಿಸಿದರು. ಶಿಕ್ಷಕ ರೂಬಿ ಪಿಂಟೊ ನಿರೂಪಿಸಿದರು. ಶಿಕ್ಷಕಿ ವಿನಯಾ ವಂದಿಸಿದರು.