ADVERTISEMENT

ಕೋಟ ಅವಳಿ ಕೊಲೆ ಪ್ರಕರಣ: ಆರೋಪಿ ರಾಘವೇಂದ್ರ ಕಾಂಚನ್ ಜಾಮೀನು ರದ್ದು

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 5:20 IST
Last Updated 27 ಜುಲೈ 2025, 5:20 IST
<div class="paragraphs"><p>ತೀರ್ಪು</p></div>

ತೀರ್ಪು

   

ಬ್ರಹ್ಮಾವರ: ಕೋಟ ಅವಳಿ ಕೊಲೆ ಪ್ರಕರಣ ಮತ್ತು ವಾಟ್ಸಾಪ್ ಗ್ರೂಪ್‌ನಲ್ಲಿ ಕೋಮು ಗಲಭೆಗೆ ಪ್ರೇರಣೆ ನೀಡಿದ ವಿಡಿಯೊಗಳನ್ನು ರವಾನೆ ಮಾಡಿದ ಆರೋಪದ ಮೇಲೆ ಬಂಧನಕ್ಕೆ ಒಳಗಾದ ಕೋಟದ ರಾಘವೇಂದ್ರ ಕಾಂಚನ್‌ ಅವರ ಜಾಮೀನಿಗೆ ಹಾಕಿದ ಅರ್ಜಿ ರದ್ದುಗೊಳಿಸಿ ಆದೇಶ ಹೊರಬಿದ್ದಿದೆ.

ಆರೋಪಿಗೆ ವಿಚಾರಣಾ ನ್ಯಾಯಾಲಯದ ಅನುಮತಿಯನ್ನು ಪಡೆಯದೆ ಉಡುಪಿ ಜಿಲ್ಲೆಯನ್ನು ಬಿಟ್ಟು ಹೊರ ಹೋಗದಂತೆ ಹಾಗೂ ಕ್ರಿಮಿನಲ್ ಅಪರಾಧಗಳಲ್ಲಿ ಭಾಗಿಯಾಗದಂತೆ ಜಾಮೀನು ಆದೇಶದಲ್ಲಿ ಷರತ್ತುಗಳನ್ನು ವಿಧಿಸಲಾಗಿತ್ತು. ಆದರೆ ಹೈಕೋರ್ಟಿನ ಜಾಮೀನು ಆದೇಶದಲ್ಲಿ ವಿಧಿಸಲಾದ ಷರತ್ತುಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಈತನಿಗೆ ಮಂಜೂರಾದ ಜಾಮೀನು ಆದೇಶವನ್ನುರದ್ದುಗೊಳಿ ಸುವಂತೆ ಉಡುಪಿ ಡಿವೈಎಸ್ಪಿ ವರದಿಯನ್ನು ಸಿದ್ಧಪಡಿಸಿದ್ದು, ಅದರಂತೆ ಸರಕಾರಿ ಅಭಿಯೋಜಕ ಪ್ರಕಾಶ್‌ಚಂದ್ರ ಶೆಟ್ಟಿ ನ್ಯಾಯಾಲಯಕ್ಕೆ ಜಾಮೀನು ರದ್ಧತಿ ಕೋರಿ ಅರ್ಜಿಯನ್ನು ಸಲ್ಲಿಸಿದ್ದರು.

ADVERTISEMENT

ಆದರೆ ನ್ಯಾಯಾಧೀಶ ಕಿರಣ್ ಗಂಗಣ್ಣನವರ್ ಈ ಅರ್ಜಿಯನ್ನು ಪರಿಶೀಲಿಸಿ, ಆರೋಪಿಗೆ ನೀಡಿದ ಜಾಮೀನು ರದ್ಧುಗೊಳಿಸಿ ನ್ಯಾಯಾಲಯಕ್ಕೆ ಶರಣಾಗುವಂತೆ ಆದೇಶ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.