ಕುಂದಾಪುರ: ಸಮೀಪದ ಎಂ ಕೋಡಿ ಬೀಚ್‌ಗೆ ಇಳಿದಿದ್ದ ಇಬ್ಬರು ಯುವಕರಲ್ಲಿ ಓರ್ವ ಮೃತಪಟ್ಟು, ಮತ್ತೊರ್ವ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೃತರನ್ನು ಬೆಳಗಾವಿ ಜಿಲ್ಲೆಯ ರಾಮದುರ್ಗದ ಮಂಜುನಾಥ (33) ಎಂದು ಗುರುತಿಸಲಾಗಿದೆ. ಕುಂದಾಪುರದಲ್ಲಿ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಮಂಜುನಾಥ್ ಸೋಮವಾರ ಸ್ನೇಹಿತ ಮಂಜುನಾಥ್ ಜತೆಯಲ್ಲಿ ಬೀಚ್‌ಗೆ ಸ್ನಾನ ಮಾಡಲು ಬಂದಿದ್ದರು.
ಇಬ್ಬರೂ ಅಲೆಗಳ ಸೆಳೆತಕ್ಕೆ ಸಿಲುಕಿ ಮುಳುಗುತ್ತಿರುವುದನ್ನು ಗಮನಿಸಿದ ಸ್ಥಳೀಯರುತಕ್ಷಣ ನೆರವಿಗೆ ಧಾವಿಸಿ ಒಬ್ಬ ಯುವಕನನ್ನು ರಕ್ಷಣೆ ಮಾಡಿದರು. ಮತ್ತೊಬ್ಬರ ರಕ್ಷಣೆ ಸಾಧ್ಯವಾಗಲಿಲ್ಲ. ಯುವಕನ ಶವವನ್ನು ಕುಂದಾಪುರದ ಶವಾಗಾರದಲ್ಲಿ ಇರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.