ADVERTISEMENT

ಕಾರ್ಕಳ: ಲಕ್ಷದೀಪೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 4:11 IST
Last Updated 11 ನವೆಂಬರ್ 2025, 4:11 IST
ಕಾರ್ಕಳ ವೆಂಕಟರಮಣ ದೇವಸ್ಥಾನದ ಲಕ್ಷ ದಿಪೋತ್ಸವ ಪ್ರಯುಕ್ತ ದೇವರನ್ನು ಚಿನ್ನದ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಾಯಿತು
ಕಾರ್ಕಳ ವೆಂಕಟರಮಣ ದೇವಸ್ಥಾನದ ಲಕ್ಷ ದಿಪೋತ್ಸವ ಪ್ರಯುಕ್ತ ದೇವರನ್ನು ಚಿನ್ನದ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಾಯಿತು   

ಕಾರ್ಕಳ: ಇಲ್ಲಿನ ಪಡುತಿರುಪತಿ ಖ್ಯಾತಿಯ ವೆಂಕಟರಮಣ ದೇವಸ್ಥಾನದ ಲಕ್ಷ ದಿಪೋತ್ಸವ ಸಂಪನ್ನಗೊಂಡಿತು.

ಲಕ್ಷದೀಪೋತ್ಸವದ ಅಂಗವಾಗಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ ಪೂಜೆಯ ನಂತರ ವೆಂಕಟರಮಣ ದೇವರು ಹಾಗೂ ಪಟ್ಟದ ಶ್ರೀನಿವಾಸ ದೇವರನ್ನು ಚಿನ್ನದ ಪ್ರತ್ಯೇಕ ಮಂಟಪಗಳಲ್ಲಿ ಕೂರಿಸಲಾಯಿತು. ವನದಲ್ಲಿ ದೇವರಿಗೆ ಪಂಚಾಮೃತ ಅಭಿಷೇಕ, ಸೀಯಾಳದ ಅಭಿಷೇಕ, ಪುಷ್ಪಾಲಂಕಾರ ಪೂಜೆ, ಪ್ರಸನ್ನ ಪೂಜೆ, ಧಾತ್ರಿ ಹವನ, ಮಹಾಪೂಜೆಗಳು ಕಾಶಿ ಮಠಾಧೀಶ ಸಂಯಂಮೀಂದ್ರ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ನಡೆದವು.

ನಂತರ ನಡೆದ ಭೂರಿ ಸಮಾರಾಧನೆಯಲ್ಲಿ ಸಹಸ್ರಾರು ಮಂದಿ ಭಾಗವಹಿಸಿದರು.

ADVERTISEMENT

ಸಂಜೆ ಉಭಯ ದೇವರನ್ನು ಸ್ವರ್ಣ ಮಂಟಪಗಳಲ್ಲಿ ಪುರ ಮೆರವಣಿಗೆಯಲ್ಲಿ ಬರಮಾಡಿಕೊಳ್ಳಲಾಯಿತು. ದಾರಿಯುದ್ದಕ್ಕೂ ನೂರಾರು ಕಟ್ಟೆ, ಕುರಿಂದು ಪೂಜೆ, ಪುನಸ್ಕಾರ, ಪನಿವಾರ ಸೇವೆಗಳು ನಡೆದವು. ನಸುಕಿನ ವೇಳೆಯಲ್ಲಿ ದೇವರನ್ನು ಸಕಲ ಬಿರುದಾವಳಿ ಸಮೇತ ದೇವಾಲಯಕ್ಕೆ ಕರೆತರಲಾಯಿತು.

ದೇವಸ್ಥಾನದ ಒಂದನೇ ಮೊಕ್ತೇಸರ ಜಯರಾಮ ಪ್ರಭು, ದೇವರ ಆವೇಶ ಪಾತ್ರಿ ವೈಕುಂಠ ಪ್ರಭು, ಪರ್ಯಾಯ ಅರ್ಚಕ ಪ್ರಶಾಂತ ಭಟ್, ರವೀಂದ್ರ ಪುರಾಣಿಕ, ಗಣೇಶ ಭಟ್, ಗೌತಮ್ ಭಟ್, ವೆಂಕಟ್ ಭಟ್, ಸೂರಿ ಭಟ್, ಸುನಿಲ್ ಪುರಾಣಿಕ, ನಿತ್ಯಾನಂದ ಪುರಾಣಿಕ, ವಿಶ್ವನಾಥ ತಂತ್ರಿ, ವೆಂಕಟೇಶ್ ತಂತ್ರಿ, ಕೃಷ್ಣ ತಂತ್ರಿ ಮೊದಲಾದವರು ಪೂಜಾ ವಿಧಿ ನೆರವೇರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.