ADVERTISEMENT

ಉಡುಪಿ | ಸಂವಿಧಾನ ಸಾಕ್ಷರತೆ ಪಸರಿಸಲಿ: ಎಚ್‌.ಎನ್‌. ನಾಗಮೋಹನ ದಾಸ್

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2025, 8:43 IST
Last Updated 8 ಮಾರ್ಚ್ 2025, 8:43 IST
<div class="paragraphs"><p>ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ ದಾಸ್</p></div>

ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ ದಾಸ್

   

ಉಡುಪಿ: ದೇಶದ ಎಲ್ಲಾ ಸಮಸ್ಯೆ, ಸವಾಲುಗಳಿಗೆ ಸಂವಿಧಾನವೊಂದೇ ಪರಿಹಾರ. ಹಾಗಾಗಿ ಸಂವಿಧಾನದ ಸಾಕ್ಷರತೆಯು ಎಲ್ಲೆಡೆ ಪಸರಿಸಬೇಕು ಎಂದು ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ ದಾಸ್ ಹೇಳಿದರು.

ನಗರದ ಎಲ್‌.ಐ.ಸಿ.ಎಂಪ್ಲಾಯೀಸ್‌ ಕೋ–ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಶನಿವಾರ ಆರಂಭಗೊಂಡ ಉಡುಪಿ ಜಿಲ್ಲಾ ಮಟ್ಟದ ಸಂವಿಧಾನ ಓದು ಅಧ್ಯಯನ ಶಿಬಿರದಲ್ಲಿ ಅವರು ಮಾತನಾಡಿದರು.

ADVERTISEMENT

ನಾವು ಮೊದಲು ನಮ್ಮಲ್ಲಿರುವ ದೋಷಗಳನ್ನು ಸರಿಪಡಿಸಿಕೊಳ್ಳಬೇಕು. ಅದು ಬಿಟ್ಟು ಸಂವಿಧಾನ ಸರಿ ಇಲ್ಲ. ಅದು ಅಪ್ರಸ್ತುತ, ಅದನ್ನು ಬದಲಿಸುತ್ತೇವೆ ಎಂದು ಹೇಳುವುದು ಸರಿಯಲ್ಲ ಎಂದರು.

ಪ್ರತಿಯೊಬ್ಬರೂ ಸಂವಿಧಾನವನ್ನು ಓದಬೇಕು ಮತ್ತು ಅರ್ಥೈಸಿಕೊಳ್ಳಬೇಕು. ಜೊತೆಗೆ ಸಂವಿಧಾನಬದ್ಧವಾಗಿ ಜೀವಿಸುವುದು ಇಂದಿನ ತುರ್ತು ಎಂದು ಅಭಿಪ್ರಾಯಪಟ್ಟರು.

ಸಾಹಿತಿ ಮುರಳೀಧರ ಉಪಾಧ್ಯ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ನಾರಾಯಣ ಸ್ವಾಮಿ ಎಂ., ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರೋಷನ್‌ ಕುಮಾರ್‌, ಪ್ರಾಧ್ಯಾಪಕಿ ನಿಕೇತನಾ, ಪ್ರಭಾಕರ ಬಿ. ಕುಂದರ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.