
ಉಡುಪಿ: ಲಯನ್ಸ್ ಜಿಲ್ಲೆ 317ಸಿ ವತಿಯಿಂದ 4 ಕಂದಾಯ ಜಿಲ್ಲೆಗಳ ವ್ಯಾಪಿಯ 114 ಕ್ಲಬ್‌ಗಳಲ್ಲಿ ಹಮ್ಮಿಕೊಂಡಿದ್ದ ಹಸಿವು ನಿವಾರಣಾ ಸೇವಾ ವಾರದ ಸಮಾರೋಪದ ಪ್ರಯುಕ್ತ ಶನಿವಾರ ನಗರದಲ್ಲಿ ಜಾಗೃತಿ ಜಾಥಾ ನಡೆಯಿತು.
ಇಲ್ಲಿನ ಸರ್ವಿಸ್ ಬಸ್ ನಿಲ್ದಾಣದ ಮುಂದಿನ ಕ್ಲಾಕ್‌ಟವರ್‌ನಿಂದ ಅಜ್ಜರಕಾಡು ಭುಜಂಗ ಪಾರ್ಕ್‌ವರೆಗೆ ನಡೆದ ಜಾಥಾಕ್ಕೆ ಲಯನ್ಸ್ 317ಸಿ ಜಿಲ್ಲಾ ಗವರ್ನರ್ ಸಪ್ನಾ ಸುರೇಶ್ ಚಾಲನೆ ನೀಡಿದರು.
ಬಳಿಕ ಭುಜಂಗಪಾರ್ಕ್‌ನಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲಿ ಹಮ್ಮಿಕೊಂಡ ಹಸಿವು ನಿವಾರಣಾ ಸೇವಾ ವಾರವನ್ನು ಲಯನ್ಸ್ ಜಿಲ್ಲೆ 317ಸಿಯ 4 ಕಂದಾಯ ಜಿಲ್ಲೆಗಳ ವ್ಯಾಪ್ತಿಯಲ್ಲಿ 113 ಲಯನ್ಸ್ ಕ್ಲಬ್‌ಗಳ 3 ಸಾವಿರಕ್ಕೂ ಅಧಿಕ ಸದಸ್ಯರ ಮೂಲಕ ಯಶಸ್ವಿಯಾಗಿ ನಡೆಸಲಾಗಿದೆ ಎಂದರು.
ಪ್ರತಿ ಕ್ಲಬ್ ತನ್ನ ಕಾರ್ಯ ವ್ಯಾಪ್ತಿಯಲ್ಲಿ ಸಮುದಾಯ ಅಡುಗೆ ಮನೆ, ಬಿಸಿಯೂಟ ಸೇವೆ, ಸರ್ಕಾರಿ ಶಾಲಾ ಮಕ್ಕಳಿಗೆ ಉಪಹಾರ, ಹಣ್ಣುಗಳ ಕಿಟ್ ವಿತರಣೆ ಸೇರಿದಂತೆ ವಿವಿಧ ಸೇವಾ ಕಾರ್ಯಗಳನ್ನು ನಡೆಸಿದೆ ಎಂದರು.
ಲಯನ್ಸ್ ಕ್ಲಬ್ ಮಣಿಪಾಲದ ಡಾ.ಗಣೇಶ್ ಪೈ, ಐಎಂಎ ಉಡುಪಿ ಕರಾವಳಿ ಅಧ್ಯಕ್ಷ ಡಾ.ಅಶೋಕ್ ಕುಮಾರ್, ಐಎಂಎ ಮಹಿಳಾ ಘಟಕದ ಅಧ್ಯಕ್ಷೆ ಡಾ.ವಿಜಯಾ ಮಾತನಾಡಿದರು. ಸಂಯೋಜಕ ಕೇಶವ ಅಮೀನ್, ಕಾರ್ಯದರ್ಶಿ ಶಾಲಿನಿ ಬಂಗೇರ, ಕೋಶಾಧಿಕಾರಿ ಶಶಿಧರ ಶೆಟ್ಟಿ, ಲಿಯೊ ಕ್ಲಬ್ ಅಧ್ಯಕ್ಷ ಚಿರಾಗ್ ಪೂಜಾರಿ, ಲಯನ್ಸ್ ಕ್ಲಬ್ ಉಡುಪಿ ಅಧ್ಯಕ್ಷ ದಿನೇಶ್ ಕಿಣಿ, ಲಿಯೊ ಕ್ಲಬ್‌ಗಳ ಪದಾಧಿಕಾರಿಗಳು, ಧನ್ವಂತರಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.