ADVERTISEMENT

ಕಾರ್ಕಳ: ಮೆಸ್ಕಾಂ ಅಧಿಕಾರಿ ಗಿರೀಶ್‌ ರಾವ್‌ ಮನೆ, ಲಾಡ್ಜ್‌ ಮೇಲೆ ಲೋಕಾಯುಕ್ತ ದಾಳಿ

​ಪ್ರಜಾವಾಣಿ ವಾರ್ತೆ
Published 31 ಮೇ 2025, 8:21 IST
Last Updated 31 ಮೇ 2025, 8:21 IST
   

ಉಡುಪಿ: ಕಾರ್ಕಳ ಮೆಸ್ಕಾಂನಲ್ಲಿ ಅಕೌಂಟ್ಸ್‌ ಆಫೀಸರ್‌ (ಎಒ) ಆಗಿ ಕಾರ್ಯ ನಿರ್ವಹಿಸುತ್ತಿರುವ ಗಿರೀಶ್‌ ರಾವ್‌ ಅವರ ಮನೆ ಹಾಗೂ ಅವರ ಒಡೆತನದಲ್ಲಿರುವ ಲಾಡ್ಜ್‌ಗಳ ಮೇಲೆ ಶನಿವಾರ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

ಕಾರ್ಕಳದ ಹಿರಿಯಂಗಡಿಯಲ್ಲಿರುವ ಗಿರೀಶ್‌ ಅವರ ಮನೆ ಹಾಗೂ ಪುಲ್ಕೇರಿ ಬೈಪಾಸ್‌ನಲ್ಲಿರುವ ಅವರ ಮಾಲೀಕತ್ವದ ಲಾಡ್ಜ್‌ಗಳ ಮೇಲೆ ದಾಳಿ ನಡೆದಿದೆ.

ಲೋಕಾಯುಕ್ತ ಎಸ್.ಪಿ. ಕುಮಾರಚಂದ್ರ ಅವರ ನೇತೃತ್ವದಲ್ಲಿ ದಾಳಿ ನಡೆದಿದ್ದು, ದಾಖಲೆಗಳ ಪರಿಶೀಲನೆ ನಡೆದಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.