ADVERTISEMENT

ಉಡುಪಿಯಲ್ಲಿ ಮ್ಯಾಗ್ನೆಟಿಕ್ ಮ್ಯಾನ್! ಜಿಲ್ಲಾಧಿಕಾರಿ ಜಿ.ಜಗದೀಶ್‌ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2021, 15:50 IST
Last Updated 14 ಜೂನ್ 2021, 15:50 IST
ರಾಮದಾಸ್‌ ಶೇಟ್ ಎಂಬುವರ ದೇಹಕ್ಕೆ ಅಂಟಿಕೊಳ್ಳುತ್ತಿದ್ದ ಲೋಹದ ವಸ್ತುಗಳು
ರಾಮದಾಸ್‌ ಶೇಟ್ ಎಂಬುವರ ದೇಹಕ್ಕೆ ಅಂಟಿಕೊಳ್ಳುತ್ತಿದ್ದ ಲೋಹದ ವಸ್ತುಗಳು   

ಉಡುಪಿ: ನಗರದ ಪಿಪಿಸಿ ಕಾಲೇಜು ಸಮೀಪದಲ್ಲಿ ವಾಸವಾಗಿರುವ ರಾಮದಾಸ್‌ ಶೇಟ್ ಎಂಬುವರ ದೇಹಕ್ಕೆ ಲೋಹದ ವಸ್ತುಗಳು ಅಂಟಿಕೊಳ್ಳುತ್ತಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಭಾನುವಾರ ರಾತ್ರಿ ವಾಟ್ಸ್‌ಆ್ಯಪ್‌ಗೆ ಬಂದ ವಿಡಿಯೊದಲ್ಲಿ ವ್ಯಕ್ತಿಯೊಬ್ಬರ ಮೈಗೆ ಕಬ್ಬಿಣದ ವಸ್ತುಗಳು ಅಂಟಿಕೊಳ್ಳುತ್ತಿರುವುದನ್ನು ನೋಡಿದ ರಾಮದಾಸ್ ಶೇಟ್‌, ಕುತೂಹಲದಿಂದ ತಮ್ಮ ದೇಹದ ಮೇಲೆ ಪರೀಕ್ಷೆ ಮಾಡಿದ್ದಾರೆ. ಈ ವೇಳೆ ಅವರ ದೇಹಕ್ಕೂ ಲೋಹದ ವಸ್ತುಗಳು ಅಂಟಿಕೊಂಡಿವೆ. ‌ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದೆ.

ವಿಡಿಯೊಬೆನ್ನಲ್ಲೇ ಕೋವಿಡ್ ಲಸಿಕೆ ಹಾಕಿಸಿಕೊಂಡ ಬಳಿಕ ದೇಹದಲ್ಲಿ ಆಯಸ್ಕಾಂತೀಯ ಶಕ್ತಿ ಹೆಚ್ಚಾಗುತ್ತದೆ ಎಂಬ ವದಂತಿ ಜಾಲತಾಣಗಳಲ್ಲಿ ಹರಡಿದ್ದರಿಂದ ಜಿಲ್ಲಾಧಿಕಾರಿ ಜಿ.ಜಗದೀಶ್‌ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದರು.‌

ADVERTISEMENT

ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದರಿಂದ ದೇಹದಲ್ಲಿ ಆಯಸ್ಕಾಂತೀಯ ಶಕ್ತಿ ಹೆಚ್ಚುವುದಿಲ್ಲ. ರಾಮದಾಸ್ ಶೇಟ್ ಅವರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಪರೀಕ್ಷೆಗೊಳಪಡಿಸಲಾಗಿದ್ದು, ಹಣೆ, ಭುಜ, ಬೆನ್ನು, ಹೊಟ್ಟೆ ಹಾಗೂ ಮೊಣಕೈ ಭಾಗದಲ್ಲಿ ಆಯಸ್ಕಾಂತೀಯ ಲಕ್ಷಣಗಳು ಇರುವುದು ಪತ್ತೆಯಾಗಿದೆ. ಆದರೆ, ಕೋವಿಡ್‌ ಲಸಿಕೆ ಹಾಕಿಸಿಕೊಂಡ ಬಳಿಕ ದೇಹದಲ್ಲಿ ಆಯಸ್ಕಾಂತೀಯ ಶಕ್ತಿ ಹೆಚ್ಚಾಗಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬಾರದು. ಕೋವಿಡ್ ಲಸಿಕೆ ಹಾಕಿಸಿಕೊಂಡ ಯಾರಲ್ಲೂ ಆಯಸ್ಕಾಂತೀಯ ಲಕ್ಷಣಗಳು ಕಂಡುಬಂದಿಲ್ಲ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.