ಉಡುಪಿ: ಮೀನುಗಾರರ ನೇತೃತ್ವದಲ್ಲಿ ಮಲ್ಪೆಯ ಕಡಲ ತೀರದಲ್ಲಿ ಭಾನುವಾರ ಸಮುದ್ರಪೂಜೆ ನೆರವೇರಿತು.
ವಿವಿಧ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ, ಬಳಿಕ ಸಮುದ್ರ ತೀರಕ್ಕೆ ತಲುಪಿದ ಮೀನುಗಾರರು, ಸಮುದ್ರಕ್ಕೆ ಹಾಲು, ಏಳನೀರು ಸಮರ್ಪಿಸಿ ಪ್ರಾರ್ಥಿಸಿದರು.
ಇನ್ನು ಸಾಂಪ್ರದಾಯಿಕ ನಾಡ ದೋಣಿಗಳನ್ನು ಸಮುದ್ರಕ್ಕೆ ಇಳಿಸಬಹುದು ಎಂದು ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಸುಂದರ್ ಪಿ.ಸಾಲ್ಯಾನ್ ತಿಳಿಸಿದರು.
ಸಂಘದ ಉಪಾಧ್ಯಕ್ಷ ದೇಜಪ್ಪ ಕೋಟ್ಯಾನ್, ಆನಂದ, ಪುರಂದರ ಕೋಟ್ಯಾನ್, ಕೃಷ್ಣ ಸುವರ್ಣ, ಭೋಜ ಸಾಲ್ಯಾನ್ ಮತ್ತು ರಮೇಶ್ ಕೋಟ್ಯಾನ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.