ADVERTISEMENT

ಉಡುಪಿ | ಬೆಳ್ಳುಳ್ಳಿ ಬಲು ದುಬಾರಿ; ಅಕ್ಕಿಯ ಬೆಲೆಯೂ ಏರಿಕೆ

ಎಚ್.ಬಾಲಚಂದ್ರ
Published 9 ಫೆಬ್ರುವರಿ 2024, 5:52 IST
Last Updated 9 ಫೆಬ್ರುವರಿ 2024, 5:52 IST
ಉಡುಪಿಯ ತರಕಾರಿ ಮಾರುಕಟ್ಟೆ
ಉಡುಪಿಯ ತರಕಾರಿ ಮಾರುಕಟ್ಟೆ   

ಉಡುಪಿ: ದಿನಬಳಕೆಯ ವಸ್ತುಗಳ ದರ ದಿನದಿಂದ ದಿನಕ್ಕೆ ಗಗನಮುಖಿಯಾಗುತ್ತಿದ್ದು, ಗ್ರಾಹಕರಿಗೆ ದರ ಏರಿಕೆ ಬಿಸಿ ತಟ್ಟಿದೆ. ಕಳೆದವಾರ ಕೆ.ಜಿಗೆ ₹350 ಮುಟ್ಟಿದ್ದ ಬೆಳ್ಳುಳ್ಳಿ ದರ ಈ ವಾರ ₹500ರ ಆಸುಪಾಸಿಗೆ ಬಂದು ತಲುಪಿದೆ.

ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ. ಬೆಳ್ಳುಳ್ಳಿಗೆ ₹450ರಿಂದ ₹ 480ರವರೆಗೆ ದರ ಇದೆ. ನಿರಂತರವಾಗಿ ಏರುಮುಖವಾಗಿ ಸಾಗಿರುವ ಬೆಳ್ಳುಳ್ಳಿ ದರ ಜನಸಾಮಾನ್ಯರನ್ನು ಕಂಗೆಡಿಸಿದ್ದು ಗೃಹಿಣಿಯರು ಒಗ್ಗರಣೆ ಹಾಕುವ ಮುನ್ನ ಯೋಚಿಸುವ ಪರಿಸ್ಥಿತಿ ಬಂದಿದೆ.

ಮಾರುಕಟ್ಟೆಗೆ ಹೊಸ ಬೆಳ್ಳುಳ್ಳಿ ಬಾರದಿರುವ ಹಿನ್ನೆಲೆಯಲ್ಲಿ ದರ ಒಂದೇ ಸಮನೆ ಏರುಗತಿಯಲ್ಲಿದೆ. ಬೆಳ್ಳುಳ್ಳಿ ಆವಕ ಹೆಚ್ಚಾದರೆ ದರ ಕಡಿಮೆಯಾಗಲಿದೆ ಎನ್ನುತ್ತಾರೆ ವ್ಯಾಪಾರಿಗಳು.

ADVERTISEMENT

ಅಕ್ಕಿಯ ದರವೂ ನಿರಂತರವಾಗಿ ಏರಿಕೆ ಕಾಣುತ್ತಿದ್ದು ಸೋನಾ ಮಸೂರಿ ಅಕ್ಕಿ ದರ ₹60ರಿಂದ ₹65ಕ್ಕೆ ಮುಟ್ಟಿದೆ. 6 ತಿಂಗಳ ಹಿಂದೆ ಸೋನಾ ಮಸೂರಿ ಅಕ್ಕಿಯ ದರ ₹45ರಿಂದ ₹50 ಇತ್ತು. ಕರಾವಳಿಯಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ಕುಚಲಕ್ಕಿ ದರವೂ ಕೆ.ಜಿ.ಗೆ ₹50 ಮುಟ್ಟಿದೆ. ರಾಜ್ಯದೆಲ್ಲೆಡೆ ಈ ವರ್ಷ ಭತ್ತ ಬೆಳೆಯ ಕ್ಷೇತ್ರ ಕುಸಿದಿರುವುದು ಮುಂದಿನ ದಿನಗಳಲ್ಲಿ ಅಕ್ಕಿ ದರ ಮತ್ತಷ್ಟು ಹೆಚ್ಚಾಗುವ ಮುನ್ಸೂಚನೆಯಂತೆ ಕಾಣುತ್ತಿದೆ ಎನ್ನುತ್ತಾರೆ ವ್ಯಾಪಾರಿ ಗಣೇಶ್ ಕಾಮತ್.

ಮಾಂಸ ದರ

ಬ್ರಾಯ್ಲರ್ ಕೋಳಿ ಮಾಂಸ ಚರ್ಮ ರಹಿತ ಕೆ.ಜಿ.ಗೆ ₹230, ಚರ್ಮ ಸಹಿತ ಮಾಂಸ ₹200 ದರ ಇದೆ. ಕುರಿ, ಆಡು ಮಾಂಸಕ್ಕೆ ಕೆ.ಜಿಗೆ ₹800 ಇದೆ. ಮೊಟ್ಟೆ ಒಂದಕ್ಕೆ ₹7 ದರ ಇದೆ. 

ಹಣ್ಣುಗಳ ದರ: ಸೇಬಿನ ದರ ಹೆಚ್ಚಾಗಿದ್ದು ಕೆ.ಜಿಗೆ ಕನಿಷ್ಠ ₹200 ರಿಂದ ₹300ರವರೆಗೆ ದರ ಇದೆ. ದರ ಹೆಚ್ಚಿದ್ದರೂ ಗುಣಮಟ್ಟದ ಸೇಬುಗಳು ಮಾರುಕಟ್ಟೆಯಲ್ಲಿ ಕಾಣುತ್ತಿಲ್ಲ. ದಾಳಿಂಬೆ ದರ ಸ್ವಲ್ಪ ಇಳಿಮುಖವಾಗಿದ್ದು ಕೆ.ಜಿಗೆ ₹160 ಇದೆ. 15 ದಿನಗಳ ಹಿಂದೆ ಕೆ.ಜಿಗೆ ₹220ಕ್ಕೆ ಮುಟ್ಟಿತ್ತು. ಕಪ್ಪು ದ್ರಾಕ್ಷಿಗೆ ಕೆ.ಜಿ.ಗೆ ₹120ರಿಂದ ₹140, ಸೀತಾಫಲ ₹100, ಸ್ಟ್ರಾಬೆರಿ ಬಾಕ್ಸ್‌ಗೆ ₹50 ದರ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.