ADVERTISEMENT

ಬಾವಿಗೆ ಬಿದ್ದ ವ್ಯಕ್ತಿಯ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2023, 16:22 IST
Last Updated 30 ಮಾರ್ಚ್ 2023, 16:22 IST
ಉದ್ಯಾವರದ ಸಂಪಿಗೆ ನಗರದ ಮಾಂಗೋಡು ದೇವಸ್ಥಾನದ ಬಳಿ 35 ಅಡಿ ಆಳವಾದ ಬಾವಿಗೆ ಬಿದ್ದು ಪ್ರಾಣಾಪಾಯಕ್ಕೆ ಸಿಲುಕಿದ ವ್ಯಕ್ತಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ.
ಉದ್ಯಾವರದ ಸಂಪಿಗೆ ನಗರದ ಮಾಂಗೋಡು ದೇವಸ್ಥಾನದ ಬಳಿ 35 ಅಡಿ ಆಳವಾದ ಬಾವಿಗೆ ಬಿದ್ದು ಪ್ರಾಣಾಪಾಯಕ್ಕೆ ಸಿಲುಕಿದ ವ್ಯಕ್ತಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ.   

ಉಡುಪಿ: ಉದ್ಯಾವರದ ಸಂಪಿಗೆ ನಗರದ ಮಾಂಗೋಡು ದೇವಸ್ಥಾನದ ಬಳಿ 35 ಅಡಿ ಆಳವಾದ ಬಾವಿಗೆ ಬಿದ್ದು ಪ್ರಾಣಾಪಾಯಕ್ಕೆ ಸಿಲುಕಿದ ವ್ಯಕ್ತಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ.

ಬಾವಿಯ ಬಳಿ ಓಡಾಡುವಾಗ ಸ್ಥಳೀಯ ನಿವಾಸಿ ಶಶೀಂದ್ರ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದರು. ಬಾವಿಯ ಅಗಲ ಕಡಿಮೆ ಇದ್ದ ಕಾರಣ ಬಿದ್ದ ರಭಸಕ್ಕೆ ಶಶೀಂದ್ರ ಅವರ ಕಾಲಿಗೆ ಬಲವಾದ ಪೆಟ್ಟಾಗಿ, ನೆರವಿಗೆ ಧಾವಿಸುವಂತೆ ಅಂಗಲಾಚಿದ್ದಾರೆ.

ಕೂಡಲೇ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದು ಸ್ಥಳಕ್ಕೆ ಆಮಿಸಿದ ಸಿಬ್ಬಂದಿ ಹಗ್ಗದ ಸಹಾಯದಿಂದ ಶಶೀಂದ್ರ ಅವರನ್ನು ಮೇಲಕ್ಕೆತ್ತಿದ್ದಾರೆ.

ADVERTISEMENT

ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ರವಿನಾಯ್ಕ, ರಾಘವೇಂದ್ರ ಆಚಾರಿ, ತೌಸಿಫ್‌, ಮುಸಿದ್ದೀಕ್ ಹಾಗೂ ಗಣೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.