ADVERTISEMENT

ನಿಬಂಧನೆಗೊಳಪಟ್ಟು ಮೈಕ್ ಬಳಸಬಹುದು: ಬಿ.ಸಿ.ಪಾಟೀಲ್‌

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2022, 13:24 IST
Last Updated 4 ಏಪ್ರಿಲ್ 2022, 13:24 IST
ಬಿ.ಸಿ.ಪಾಟೀಲ್
ಬಿ.ಸಿ.ಪಾಟೀಲ್   

ಉಡುಪಿ: ಕರ್ನಾಟಕ ಪೊಲೀಸ್ ಕಾಯ್ದೆಯಡಿ ನಿಬಂಧನೆಗೊಳಪಟ್ಟು ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ಮೈಕ್ ಬಳಸಲು ಅವಕಾಶವಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ಕುರಿತು ಸೋಮವಾರ ಬೈಂದೂರಿನಲ್ಲಿ ಪ್ರತಿಕ್ರಿಯೆ ನೀಡಿದ ಸಚಿವರು, ಪರವಾನಗಿ ಪಡೆದು ಧ್ವನಿವರ್ಧಕಗಳನ್ನು ಬಳಸಬಹುದು. ಆದರೆ, 50 ಅಡಿಗೂ ಎತ್ತರದಲ್ಲಿ ಮೈಕ್‌ಗಳನ್ನು ಅಳವಡಿಸುವಂತಿಲ್ಲ ಎಂದರು.

ಹಲಾಲ್, ಜಟ್ಕಾ ವಿಚಾರದಲ್ಲಿ ಸರ್ಕಾರದ ನಿಲುವಿಗಿಂತ ಸಾರ್ವಜನಿಕರ ನಿಲುವು ಮುಖ್ಯ. ಹಲಾಲ್ ಬೇಕೋ, ಜಟ್ಕಾ ಬೇಕೋ ಎಂಬುದನ್ನು ಜನರೇ ನಿರ್ಧರಿಸಬೇಕು. ಸರ್ಕಾರ ಮಧ್ಯೆ ಪ್ರವೇಶಿಸುವುದು ಸರಿಯಲ್ಲ ಎಂದರು.

ADVERTISEMENT

ಹಲಾಲ್, ಜಟ್ಕಾ ವಿವಾದದಲ್ಲಿ ಕಾಂಗ್ರೆಸ್‌ ತನ್ನ ತಪ್ಪನ್ನು ಮರೆಮಾಚಲು ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದೆ ಎಂದು ಸಚಿವ ಬಿ.ಸಿ.ಪಾಟೀಲ್‌ ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.