
ಉಡುಪಿ: ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಹಮ್ಮಿಕೊಂಡ ಲಕ್ಷಕಂಠ ಗೀತಾ ಪಠಣ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ನಾಗರಿಕರಿಗೆ ‘ನವ ಸಂಕಲ್ಪ’ ಮಾಡುವಂತೆ ಮನವಿ ಮಾಡಿದರು.
ಎಲ್ಲರೂ ಈ ಒಂಬತ್ತು ಸಂಕಲ್ಪ ಮಾಡಿ; ವರ್ತಮಾನ ಮತ್ತು ಭವಿಷ್ಯಕ್ಕೆ ಇವು ಅಗತ್ಯ ಎಂದು ಒತ್ತಿ ಹೇಳಿದರು.
ಮೊದಲ ಸಂಕಲ್ಪ: ಜಲಸಂರಕ್ಷಣೆ ಮಾಡುವುದು.
ಎರಡನೇ ಸಂಕಲ್ಪ: ಮರ ಬೆಳೆಸುವುದು, ತಾಯಿಯ ಹೆಸರಲ್ಲಿ ಒಂದು ಮರ ಅಭಿಯಾನ ಆರಂಭಿಸಿ.
ಮೂರನೇ ಸಂಕಲ್ಪ: ಪ್ರತಿಯೊಬ್ಬರೂ ಕನಿಷ್ಠಪಕ್ಷ ಒಬ್ಬ ಬಡವರ ಜೀವನ ಸುಧಾರಿಸಿ.
ನಾಲ್ಕನೇ ಸಂಕಲ್ಪ: ಸ್ವದೇಶಿ ಅಳವಡಿಸಿಕೊಳ್ಳಿ. ವೋಕಲ್–ಲೋಕಲ್ ಮಂತ್ರ ನಮ್ಮದಾಗಲಿದೆ.
ಐದನೇ ಸಂಕಲ್ಪ: ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳಿ.
ಆರನೇ ಸಂಕಲ್ಪ: ಆರೋಗ್ಯಪೂರ್ಣ ಜೀವನ ಶೈಲಿ ಅಳವಡಿಸಿಕೊಳ್ಳೋಣ. ಊಟದಲ್ಲಿ ಎಣ್ಣೆ ಕಡಿಮೆ ಮಾಡೋಣ, ಸಿರಿಧಾನ್ಯ ಬಳಸೋಣ.
ಏಳನೇ ಸಂಕಲ್ಪ: ಯೋಗ ಅಳವಡಿಸಿಕೊಳ್ಳಿ, ಎಲ್ಲರೂ ಯೋಗಿಗಳಾಗಿ.
ಎಂಟನೇ ಸಂಕಲ್ಪ: ಹಸ್ತಪ್ರತಿ ಸಂರಕ್ಷಣೆಗೆ ಸಹಯೋಗ ನೀಡಿ.
ಒಂಬತ್ತನೇ ಸಂಕಲ್ಪ: ಕನಿಷ್ಠ ಪಕ್ಷ ದೇಶದ 25 ಪುಣ್ಯ ಕ್ಷೇತ್ರಗಳ ದರ್ಶನ ಮಾಡುತ್ತೇನೆ ಎಂಬ ಸಂಕಲ್ಪ ಮಾಡಿ.
2047 ಅಮೃತ ಕಾಲದ ಗುರಿಯನ್ನು ನನಸಾಗಿಸಲು ಭಾರತೀಯರು ಎಲ್ಲರೂ ತಮ್ಮ ಕರ್ತವ್ಯ ನಿಭಾಯಿಸಬೇಕು. ವಿಕಸಿತ ಕರ್ನಾಟಕ; ವಿಕಸಿತ ಭಾರತ ಸಂಕಲ್ಪ ನಮ್ಮದಾಗಲಿ ಎಂದರು.
ಎಲ್ಲರಿಗೂ ನಮಸ್ಕಾರ.. ಕನ್ನಡದಲ್ಲಿ ಮಾತು ಆರಂಭಿಸಿದರು. ಜೈ ಶ್ರೀಕೃಷ್ಣ ಘೋಷಣೆ ಹಾಕಿದರು.
ತಮ್ಮ ಭಾವಚಿತ್ರ ಹಿಡಿದು ನಿಂತಿದ್ದವರಿಂದ ಮೋದಿ ಅವುಗಳನ್ನು ಪಡೆದುಕೊಳ್ಳುವಂತೆ ಎಸ್‌ಪಿಜಿ ಅವರಿಗೆ ಸೂಚಿಸಿದರು. ಹಿಂದೆ ವಿಳಾಸ ಬರೆಯಿರಿ. ನಾನು ಅಭಿನಂದನಾ ಪತ್ರ ಕಳಿಸುವೆ ಎಂದು ಹೇಳಿ ಸಮಾಧಾನ ಪಡಿಸಿದರು.
ಜನಸಂಘ ಮತ್ತು ಮತ್ತು ಬಿಜೆಪಿಯ ಉತ್ತಮ ಆಡಳಿತದ ಮಾದರಿಯ ಕರ್ಮಭೂಮಿ ಉಡುಪಿ.ವಿಎಸ್ ಆಚಾರ್ಯ ಮತ್ತಿತರರ ಸ್ಮರಣೆ.
ಲಕ್ಷ ಕಂಠ ಗೀತಾ ಪಠಣ ಅಭಿಯಾನ ಹಮ್ಮಿಕೊಂಡಿರುವ ಸುಗುಣೇಂದ್ರ ಶ್ರೀಗೆ ಅಭಿನಂದನೆ. ಈದು ಸನಾತನ ಸಂಸ್ಕೃತಿ ಅಭಿಯಾನ. ಇದರಿಂದ ನನಗೆ ಬಹಳ ಪ್ರೇರಣೆ ಸಿಕ್ಕಿದೆ.
ಭಗವದ್ಗೀತೆಯೊಂದಿಗೆ ನವಪೀಳಿಗೆಯನ್ನು ಜೋಡಿಸುವ ಸತ್ಕಾರ್ಯ ಇದು.
25 ನವೆಂಬರ್‌ರಂದು ನಾನು ಅಯೋಧ್ಯೆಯಲ್ಲಿದ್ದೆ. ಅಯೋಧ್ಯೆಯ ರಾಮಮಂದಿರದ ಮೇಲೆ ಧರ್ಮಧ್ವಜದ ಸ್ಥಾಪನೆಯಾಗಿದೆ. ಅಯೋಧ್ಯೆಯಿಂದ ಉಡುಪಿ ವರೆಗೆ ಅಸಂಖ್ಯ ರಾಮಭಕ್ತರು ಸಂತುಷ್ಟರಾಗಿದ್ದಾರೆ. ರಾಮಮಂದಿರ ಹೋರಾಟದ ಹಾದಿ ಎಲ್ಲರಿಗೂ ಗೊತ್ತಿದೆ.
ಜಗದ್ಗುರು ಮಧ್ವಾಚಾರ್ಯರಿಂದ ಸ್ಥಾಪನೆಯಾದ ಉಡುಪಿಯಲ್ಲಿ ವೇದಾನಂತ ಅಧ್ಯಯನ, ಭಗವಾನ್ ಶ್ರೀಕೃಷ್ಣನ ಆರಾಧನೆ ಇದೆ. ಲಕ್ಷಾಂತರ ಭಕ್ತರಿಗೆ ಅನ್ನದಾನ ಸೇವೆ ಇದೆ. ಇದು ಭಕ್ತಿ, ಆಧ್ಯಾತ್ಮಿಕತೆಯ ಸಂಗಮ ತೀರ್ಥವಾಗಿದೆ.
ಮಧ್ವಾಚಾರ್ಯರೊಂದಿಗೆ ದಾಸ ಪರಂಪರೆಯೂ ಇಲ್ಲಿಯ ಇನ್ನೊಂದು ಕೊಡುಗೆ.
ಕನಕದಾಸರ ಭಕ್ತಿಯೂ ದೊಡ್ಡದು.
ಲೋಕ ಕಲ್ಯಾಣದ ಸಂದೇಶ ಭಗವದ್ಗೀತೆಯಲ್ಲಿದೆ. ಸರ್ವಜನ ಸುಖಾಯ–ಸರ್ವಜನ ಹಿತಾಯ, ಸಬ್‌ಕಾ ಸಾಥ್–ಸಬ್‌ಕಾ ವಿಕಾಸ ಇದು ಭಗವದ್ಗೀತೆಯಿಂದ ಬಂದ ಪ್ರೇರಣೆ.
ಭಗವಾನ್ ಶ್ರೀಕೃಷ್ಣನ ಸಂದೇಶ ಪಾಲನೆಗಾಗಿ ಅತ್ಯಾಚಾರಿಗಳ ಅಂತ್ಯವೂ ಅಗತ್ಯವಾಗಿದೆ.
ಧರ್ಮ ರಕ್ಷಣೆ; ದುಷ್ಟ ಸಂಹಾರವೂ ನಮಗೆ ಗೊತ್ತು. ಧರ್ಮಸಂದೇಶವನ್ನೂ ಕೊಡುತ್ತೇವೆ; ಅದರ ಜೊತೆಗೆ ಮಿಷನ್ ಸುದರ್ಶನ ಚಕ್ರದ ಪ್ರಯೋಗವನ್ನೂ ಮಾಡುತ್ತೇವೆ. ದೇಶವಿರೋಧಿಗಳ ಮೇಲೆಗೆ ನಮ್ಮ ಸುದರ್ಶನ ಚಕ್ರ ಪ್ರಯೋಗ. ಆಪರೇಷನ್ ಸಿಂದೂರು ಮೆಲಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.