ADVERTISEMENT

ಉಡುಪಿ: 54 ನಿಷೇಧಿತ ಎಂಡಿಎಂಎ ಮಾತ್ರೆ ವಶಕ್ಕೆ, ಒಬ್ಬನ ಬಂಧನ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 13:13 IST
Last Updated 15 ಅಕ್ಟೋಬರ್ 2020, 13:13 IST
ಎಂಡಿಎಂಎ ಮಾದಕ ವಸ್ತು
ಎಂಡಿಎಂಎ ಮಾದಕ ವಸ್ತು    

ಉಡುಪಿ: ಮಣಿಪಾಲದ ಆರ್‌ಟಿಒ ಕಚೇರಿ ರಸ್ತೆಯ ಎಂಡ್‌ ಪಾಯಿಂಟ್ ಬಳಿ ನಿಷೇಧಿತ ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಬ್ರಹ್ಮಾವರದ ಮಹಮ್ಮದ್ ಫಜಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನಿಂದ 4.62 ಲಕ್ಷ ಮೌಲ್ಯದ 54 ಎಂಡಿಎಂಎ ಮಾತ್ರೆಗಳು, 30 ಗ್ರಾಂ ಬ್ರೌನ್‌ ಶುಗರ್, 2 ಮೊಬೈಲ್‌ ವಶಪಡಿಸಿಕೊಳ್ಳಲಾಗಿದೆ. ಆರೋಪಿಯು ಮಣಿಪಾಲದ ವಿದ್ಯಾರ್ಥಿಗಳಿಗೆ ಡ್ರಗ್ಸ್‌ ಮಾರಾಟ ಮಾಡಲು ಬಂದಿದ್ದ ವೇಳೆ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಅ.4ರಂದು ಕೂಡ ಮಣಿಪಾಲದ ಶೀಂಬ್ರಾ ಸೇತುವೆ ಬಳಿ ಮಾದಕವಸ್ತು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದ ಪೊಲೀಸರು ₹ 14.94 ಲಕ್ಷ ಮೌಲ್ಯದ 498 ಎಂಡಿಎಂಎ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.