ADVERTISEMENT

ಉಡುಪಿ: ಬೋಟ್‌ ಪಲ್ಟಿ| ಓರ್ವ ಸಾವು- ಇಬ್ಬರ ರಕ್ಷಣೆ, ಐವರು ನಾಪತ್ತೆ

​ಪ್ರಜಾವಾಣಿ ವಾರ್ತೆ
Published 15 ಮೇ 2021, 16:53 IST
Last Updated 15 ಮೇ 2021, 16:53 IST
ಬೋಟ್‌ ಅವಘಡದಲ್ಲಿ ಬದುಕುಳಿದವರು
ಬೋಟ್‌ ಅವಘಡದಲ್ಲಿ ಬದುಕುಳಿದವರು   

ಉಡುಪಿ: ಮಂಗಳೂರಿನ ಎಂಆರ್‌ಪಿಎಲ್‌ ಕಂಪನಿಯ ನಿರ್ವಹಣೆಗೆ ಸಂಬಂಧಪಟ್ಟ ಸಣ್ಣ ಬೋಟ್‌ ಶನಿವಾರ ಅಲೆಗಳ ಹೊಡೆತಕ್ಕೆ ಸಿಕ್ಕು ಮಗುಚಿದೆ. ಅವಘಡದಲ್ಲಿ ಓರ್ವ ಮೃತ‍ಪಟ್ಟಿದ್ದು ಕಾಪು ಬಳಿಯ ಸಮುದ್ರದಲ್ಲಿ ಶವ ಪತ್ತೆಯಾಗಿದೆ.

ಟ್ಯೂಬ್ ಸಹಾಯದಿಂದ ಸಮುದ್ರದಲ್ಲಿ ತೇಲುತ್ತಿದ್ದ ಇಬ್ಬರನ್ನು ಮಟ್ಟು ಶಿರ್ವದ ಮಟ್ಟು ಸಮೀಪ ಮೀನುಗಾರರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕೊಲ್ಕತ್ತ ಮೂಲದ ಮುನಿರುಲ್ ಮುಲ್ಲಾ ಮತ್ತು ಕರಿಮುಲ್ ಶೇಖ್ ಬದುಕುಳಿದವರು. ಬೋಟ್‌ನಲ್ಲಿ 8 ಮಂದಿ ಇದ್ದರು. ಐವರು ನಾಪತ್ತೆಯಾಗಿದ್ದು, ಪತ್ತೆಗೆ ಶೋಧ ಮುಂದುವರಿದಿದೆ ಎಂದು ಕರಾವಳಿ ಕಾವಲುಪಡೆಯ ಎಸ್‌ಪಿ ಚೇತನ್ ಮಾಹಿತಿ ನೀಡಿದರು.

ADVERTISEMENT

ಚಂಡಮಾರುತದ ಮುನ್ಸೂಚನೆ ಹಿನ್ನೆಲೆಯಲ್ಲಿ ದಡಕ್ಕೆ ವಾಪಸ್ ಬರುವಾಗ ದುರ್ಘಟನೆ ಸಂಭವಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.