ADVERTISEMENT

ಉಡುಪಿ: ಒಂದು ಸಾವು, 258 ಪಾಸಿಟಿವ್‌

ಉಡುಪಿ‌: 218 ಸೋಂಕಿತರು ಗುಣಮುಖ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 15:07 IST
Last Updated 9 ಸೆಪ್ಟೆಂಬರ್ 2020, 15:07 IST

ಉಡುಪಿ: ಜಿಲ್ಲೆಯಲ್ಲಿ ಬುಧವಾರ ಕೋವಿಡ್‌ ಸೋಂಕಿತ ವ್ಯಕ್ತಿಯೊಬ್ಬ ಮೃತಪಟ್ಟು, 258 ಮಂದಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಉಡುಪಿಯ 162, ಕುಂದಾಪುರದ39, ಕಾರ್ಕಳದ 41 ಹಾಗೂ ಇತರೆ ಜಿಲ್ಲೆಗಳ 16 ಜನರಿಗೆ ಸೋಂಕು ದೃಢವಾಗಿದೆ.

ಪ್ರಾಥಮಿಕ ಸಂಪರ್ಕದಿಂದ 171, ಶೀತಜ್ವರದ ಲಕ್ಷಣಗಳಿದ್ದ 49, ತೀವ್ರ ಉಸಿರಾಟದ ಸಮಸ್ಯೆ ಇದ್ದ 7 ಜನರಲ್ಲಿ ಸೋಂಕು ಪತ್ತೆಯಾದರೆ, 31 ಮಂದಿಯ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ. ಇವರಲ್ಲಿ 164 ಪುರುಷರು, 104 ಮಹಿಳೆಯರು ಇದ್ದಾರೆ.

144 ಸೋಂಕಿತರಿಗೆ ರೋಗ ಲಕ್ಷಣಗಳಿದ್ದರೆ, 114 ಮಂದಿಗೆ ಲಕ್ಷಣಗಳಿಲ್ಲ. ಬುಧವಾರ 1,315 ಶಂಕಿತರ ಮಾದರಿಗಳನ್ನು ಪ್ರಯೋಗಾಲಯಗಳಿಗೆ ಪರೀಕ್ಷೆಗೆ ಕಳುಹಿಸಲಾಗಿದೆ.

ADVERTISEMENT

218 ರೋಗಿಗಳು ಗುಣಮುಖರಾಗಿದ್ದು, ಇದುವರೆಗೂ 11,342 ಮಂದಿ ಸೋಂಕು ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 1,884 ಸಕ್ರಿಯ ಪ್ರಕರಣಗಳಿವೆ. ಒಟ್ಟು ಪ್ರಕರಣಗಳ ಸಂಖ್ಯೆ 13,345ಕ್ಕೇರಿಕೆಯಾಗಿದೆ.

ವ್ಯಕ್ತಿ ಸಾವು:ಹಲವು ಗಂಭೀರ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಕಾರ್ಕಳ ತಾಲ್ಲಕಿನ 66 ವರ್ಷದ ಸೋಂಕಿತ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಮೃತ ಸೋಂಕಿತರ ಸಂಖ್ಯೆ 122ಕ್ಕೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.