ADVERTISEMENT

ದುಶ್ಚಟಗಳಿಗೆ ಮಕ್ಕಳು ಬಲಿಯಾಗದಂತೆ ಎಚ್ಚರ ವಹಿಸಿ: ಸೌಜನ್ಯಾ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2022, 5:41 IST
Last Updated 14 ನವೆಂಬರ್ 2022, 5:41 IST
ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ಪಾಲಕರ ಸಭೆಯಲ್ಲಿ ಉಡುಪಿಯ ಡಾ.ಎ.ವಿ. ಬಾಳಿಗ ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯಾ ಶೆಟ್ಟಿ ಮಾತನಾಡಿದರು.
ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ಪಾಲಕರ ಸಭೆಯಲ್ಲಿ ಉಡುಪಿಯ ಡಾ.ಎ.ವಿ. ಬಾಳಿಗ ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯಾ ಶೆಟ್ಟಿ ಮಾತನಾಡಿದರು.   

ಪಡುಬಿದ್ರಿ: ಪದವಿಪೂರ್ವ ಹಂತದಲ್ಲಿ ಮಕ್ಕಳ ಮನಸ್ಸು ಚಂಚಲವಾಗಿರುತ್ತದೆ. ಆಗ ಅವರು ಅಡ್ಡದಾರಿಗೆ ಇಳಿಯದಂತೆ ಜಾಗೃತಿ ವಹಿಸಬೇಕು. ದುಶ್ಚಟಗಳಿಗೆ ಬಲಿಯಾಗದಂತೆ ಪೋಷಕರು ಎಚ್ಚರದಿಂದಿರಬೇಕು ಎಂದು ಉಡುಪಿಯ ಡಾ.ಎ.ವಿ. ಬಾಳಿಗ ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯಾ ಶೆಟ್ಟಿ ಹೇಳಿದರು.

ಇಲ್ಲಿನ ಅದಮಾರು ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ಪಾಲಕರ ಸಭೆಯಲ್ಲಿ ಅವರು ಮಾತನಾಡಿದರು.

ಟಿವಿ, ಮೊಬೈಲ್, ಬೈಕ್‌ಗಳತ್ತ ಆಕರ್ಷಿತರಾಗಿ ಮಕ್ಕಳು ತಮ್ಮ ಜೀವನವನ್ನೂ ಹಾಳುಮಾಡಿಕೊಳ್ಳದಂತೆ ನೋಡಿಕೊಳ್ಳಬೇಕು ಎಂದರು.

ADVERTISEMENT

ಸಂಸ್ಥೆಯ ಪ್ರಾಂಶುಪಾಲ ಸಂಜೀವ ನಾಯ್ಕ್‌ ಅಧ್ಯಕ್ಷತೆ ವಹಿಸಿ, ‘ಮಕ್ಕಳು ಹೆತ್ತವರಿಗೆ ಅಮೂಲ್ಯ ಆಸ್ತಿ. ಮಕ್ಕಳನ್ನು ಕಾಲೇಜಿಗೆ ಕಳುಹಿಸಿದ ಮೇಲೆ ಅವರನ್ನು ನಾವು ಮನೆಯ ಮಕ್ಕಳಂತೆ ಇಲ್ಲಿ ನೋಡಿಕೊಳ್ಳುತ್ತೇವೆ, ಶಿಸ್ತು ಕಲಿಸುತ್ತೇವೆ, ಮನೆಯಲ್ಲಿ ಹೆತ್ತವರು ಮಕ್ಕಳ ಬಗ್ಗೆ ನಿಗಾ ವಹಿಸಲೇಬೇಕು’ ಎಂದರು.

ವಿಜ್ಷಾನ ವಿಭಾಗದ ಸಂಯೋಜಕ ಸುಬ್ರಹ್ಮಣ್ಯ ಭಟ್ ಇದ್ದರು. ಉಪನ್ಯಾಸಕರ ಪ್ರತಿನಿಧಿಯಾದ ಡಾ.ಜಯಶಂಕರ ಕಂಗಣ್ಣಾರು ಸ್ವಾಗತಿಸಿದರು. ಭೌತಶಾಸ್ತ್ರ ಉಪನ್ಯಾಸಕ ತೇಜಸ್ ಬಲ್ಲಾಳ್ ವಂದಿಸಿದರು. ಮಧುಸೂದನ್ ಗಾಂವ್‌ಕರ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.