ADVERTISEMENT

ಪಡುಬಿದ್ರಿ ದೇಗುಲ ಜೀರ್ಣೋದ್ಧಾರ: ನಂದಿಗೆ ಬೆಳ್ಳಿ ಕವಚಕ್ಕೆ ಸಂಕಲ್ಪ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 2:50 IST
Last Updated 19 ಜನವರಿ 2026, 2:50 IST
ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಪ್ರಕ್ರಿಯೆಯಲ್ಲಿ ದೇವಸ್ಥಾನದ ತೀರ್ಥ ಮಂಟಪದ ನಂದಿಗೆ ಬೆಳ್ಳಿ ಕವಚದ ನಿರ್ಮಾಣಕ್ಕಾಗಿ ಸಂಕಲ್ಪಿಸಿದೆ
ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಪ್ರಕ್ರಿಯೆಯಲ್ಲಿ ದೇವಸ್ಥಾನದ ತೀರ್ಥ ಮಂಟಪದ ನಂದಿಗೆ ಬೆಳ್ಳಿ ಕವಚದ ನಿರ್ಮಾಣಕ್ಕಾಗಿ ಸಂಕಲ್ಪಿಸಿದೆ   

ಪಡುಬಿದ್ರಿ: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ, ಪುನರ್ ನಿರ್ಮಾಣ ಪ್ರಕ್ರಿಯೆಗಳಲ್ಲಿ ಶ್ರೀದೇವಸ್ಥಾನದ ಮಾತೃ ಮಂಡಳಿಯು ತೀರ್ಥ ಮಂಟಪದ ನಂದಿಗೆ ಬೆಳ್ಳಿ ಕವಚದ ನಿರ್ಮಾಣಕ್ಕಾಗಿ ಸಂಕಲ್ಪಿಸಿದೆ.

ಭಕ್ತರು ಕಿರು ಕಾಣಿಕೆಯ ಅರ್ಪಣೆಯೊಂದಿಗೆ ದೇವಸ್ಥಾನದ ಜೀರ್ಣೋದ್ಧಾರದಲ್ಲಿ ಸಾಮೂಹಿಕ, ಸಾಮುದಾಯಿಕ ದೇಣಿಗೆಯನ್ನು ನಿರೀಕ್ಷಿಸುತ್ತಿರುವುದಾಗಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ ಹೇಳಿದ್ದಾರೆ.

ಮಂಡಳಿಯ ಪ್ರಾರಂಭದ ಸಭೆಯಲ್ಲಿ ನಂದಿಯ ಮುಖಭಾಗಕ್ಕೆ ಬೆಳ್ಳಿ ಮಡಾಯಿಸಲು ಸಂಕಲ್ಪಿಸಿ, ತಮ್ಮ ಕಾರ್ಯ ಮುಂದುವರಿಸಿರುವ ಮಾತೆಯರು ಸೇರಿದ ಸಭೆಯಲ್ಲಿ 2ಕೆ.ಜಿಯಷ್ಟು ಬೆಳ್ಳಿ ಹಾಗೂ ₹1.67 ಲಕ್ಷ ಹಣ ಸಂಗ್ರಹಿಸಿದ್ದಾರೆ. ಬೆಳ್ಳಿ ಕವಚಕ್ಕೆ 3 ಕೆ.ಜಿಗಳಷ್ಟು ಬೆಳ್ಳಿ, ನಂದಿಗೆ ಪೂರ್ಣ ಬೆಳ್ಳಿ ಕವಚವನ್ನು ಹೊಂದಿಸಲು ಸಮಾರು 18 ಕೆ.ಜಿಯಷ್ಟು ಬೆಳ್ಳಿ ಅಂದಾಜಿಸಿದೆ.

ADVERTISEMENT

ದೇಗುಲದ ಸಂಕಲ್ಪಿತ ಜೀರ್ಣೋದ್ಧಾರ ಕಾರ್ಯವನ್ನು ಪೂರ್ಣಗೊಳಿಸಲು ಸಂಪೂರ್ಣ ಸಹಕಾರ ಅಗತ್ಯ ಎಂದು ದೇಗುಲದ ಅನುವಂಶಿಕ ಮೊಕ್ತೇಸರರಾದ ಪಡುಬಿದ್ರಿ ಬೀಡು ರತ್ನಾಕರ ರಾಜ್ ಅರಸು ಕಿನ್ಯಕ್ಕ ಬಲ್ಲಾಳರು, ಪಡುಬಿದ್ರಿ ಪೇಟೆಮನೆ ಭವಾನಿಶಂಕರ ಹೆಗ್ಡೆ ಹಾಗೂ ಕೊರ್ನಾಯ ಮನೆ ಶ್ರೀಪತಿ ಕೊರ್ನಾಯ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.