ADVERTISEMENT

ಪೋಕ್ಸೊ ಪ್ರಕರಣ: ಚಂದ್ರ ಹೆಮ್ಮಾಡಿಗೆ 10 ವರ್ಷ ಜೈಲು

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2021, 14:04 IST
Last Updated 8 ಮಾರ್ಚ್ 2021, 14:04 IST
ಚಂದ್ರ ಕೆ.ಹೆಮ್ಮಾಡಿ
ಚಂದ್ರ ಕೆ.ಹೆಮ್ಮಾಡಿ   

ಉಡುಪಿ: ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಚಂದ್ರ ಕೆ.ಹೆಮ್ಮಾಡಿ ಎಂಬಾತನಿಗೆ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯದ ಪೋಕ್ಸೊ ತ್ವರಿತ ವಿಶೇಷ ನ್ಯಾಯಾಲಯ 10 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ₹ 10,000 ದಂಡ ವಿಧಿಸಿದೆ.

ಚಂದ್ರ ಹೆಮ್ಮಾಡಿ ಮೇಲೆ ಹಿಂದೆ 21 ಪೋಕ್ಸೊ ಪ್ರಕರಣಗಳು ದಾಖಲಾಗಿದ್ದವು. ಇವುಗಳಲ್ಲಿ ಮೊದಲ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಯಾದವ್ ವನಮಾಲಾ ಆನಂದರಾವ್ ಸೋಮವಾರ ಆದೇಶ ಪ್ರಕಟಿಸಿದ್ದಾರೆ.

ಸರಣಿ ಲೈಂಗಿಕ ದೌರ್ಜನ್ಯ:

ADVERTISEMENT

ಬಾಲಕನನ್ನು ಪುಸಲಾಯಿಸಿ ಛಾಯಾಚಿತ್ರ ತೆಗೆಯಲು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ ಚಂದ್ರ ಹೆಮ್ಮಾಡಿ ಅನೈಸರ್ಗಿಕ ಲೈಂಗಿಕ ದೌರ್ಜನ್ಯ ಎಸಗಿದ್ದ. ಘಟನೆ ಬಳಿಕ ಮಾನಸಿಕವಾಗಿ ಜರ್ಜರಿತನಾಗಿದ್ದ ಬಾಲಕನಿಗೆ ಕೌನ್ಸೆಲಿಂಗ್ ನಡೆಸಿದಾಗ ಲೈಂಗಿಕ ದೌರ್ಜನ್ಯ ಬಯಲಾಗಿತ್ತು.

ಇದಾದ ಬಳಿಕ ಚಂದ್ರ ಹೆಮ್ಮಾಡಿಯ ಸರಣಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಬೈಂದೂರು, ಕೊಲ್ಲೂರು ಸೇರಿದಂತೆ ವಿವಿಧ ಠಾಣೆಗಳಲ್ಲಿ ಚಂದ್ರ ಹೆಮ್ಮಾಡಿ ವಿರುದ್ಧ 21 ಪೋಕ್ಸೊ ಪ್ರಕರಣಗಳು ದಾಖಲಾಗಿವೆ.ವ್ಯಕ್ತಿಯೊಬ್ಬನ ಮೇಲೆ ದಾಖಲಾದ ಗರಿಷ್ಠ ಪೋಕ್ಸೊ ಪ್ರಕರಣಗಳು ಇದಾಗಿದೆ.

ಪೋಕ್ಸೊ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕ ವೈ.ಟಿ ರಾಘವೇಂದ್ರ ಸರ್ಕಾರದ ಪರ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.