ADVERTISEMENT

ಪೊಲೀಸ್ ಕ್ರೀಡಾಕೂಟ ಸಮಾರೋಪ: ನಾಗೇಶ್ ಗೌಡ, ಜಯಾ ವೈಯಕ್ತಿಕ ಚಾಂಪಿಯನ್‌

ವಿಜೇತರಿಗೆ ಬಹುಮಾನ ವಿತರಣೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2022, 15:10 IST
Last Updated 7 ಜನವರಿ 2022, 15:10 IST
ಉಡುಪಿಯ ಅಜ್ಜರಕಾಡು ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಉಡುಪಿ ಜಿಎಸ್‌ಟಿ ವಿಭಾಗದ ಸಹಾಯಕ ಆಯುಕ್ತೆ ಡಾ.ನಿಮಿಷಾಂಭ ಮಾತನಾಡಿದರು.
ಉಡುಪಿಯ ಅಜ್ಜರಕಾಡು ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಉಡುಪಿ ಜಿಎಸ್‌ಟಿ ವಿಭಾಗದ ಸಹಾಯಕ ಆಯುಕ್ತೆ ಡಾ.ನಿಮಿಷಾಂಭ ಮಾತನಾಡಿದರು.   

ಉಡುಪಿ: ಇಲ್ಲಿನ ಅಜ್ಜರಕಾಡು ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಬೈಂದೂರು ಠಾಣೆಯ ನಾಗೇಶ್ ಗೌಡ ಪುರುಷರ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಗೆದ್ದುಕೊಂಡರು. ಮಹಿಳಾ ವಿಭಾಗದಲ್ಲಿ ಮಹಿಳಾ ಠಾಣೆಯ ಜಯಾ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಶುಕ್ರವಾರ ನಡೆಸ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಿಸಲಾಯಿತು. ವಾಲಿಬಾಲ್‌ ಪಂದ್ಯದಲ್ಲಿ ಡಿಪಿಎರ್ ಪ್ರಥಮ ಸ್ಥಾನ ಪಡೆದುಕೊಂಡರೆ, ಡಿಎಆರ್ ತಂಡ ದ್ವಿತೀಯ ಸ್ಥಾನ ಪಡೆಯಿತು. ಪುರುಷರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಡಿಪಿಒ ಪ್ರಥಮ, ಕುಂದಾಪುರ ತಂಡ ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ಉಡುಪಿ ಪ್ರಥಮ, ಕುಂದಾಪುರ ದ್ವಿತೀಯ, ಕಬ್ಬಡ್ಡಿ ಪಂದ್ಯಾಟದಲ್ಲಿ ಡಿಎಆರ್‌ ಪ್ರಥಮ, ಉಡುಪಿ ದ್ವಿತೀಯ ಬಹುಮಾನ ಪಡೆದುಕೊಂಡಿತು.

4x100 ಮೀಟರ್ ರಿಲೇ ಪುರುಷರ ಸ್ಪರ್ಧೆಯಲ್ಲಿ ಡಿಎಆರ್‌ ಪ್ರಥಮ, ಡಿಪಿಒ ದ್ವಿತೀಯ ಹಾಗೂ ಕಾರ್ಕಳ ಎಸ್‌ಬಿ ತೃತೀಯ ಸ್ಥಾನ ಪಡೆದರೆ, ಮಹಿಳೆಯರ ವಿಭಾಗದಲ್ಲಿ ಕುಂದಾಪುರ ಪ್ರಥಮ, ಕಾರ್ಕಳ ದ್ವಿತೀಯ, ಉಡುಪಿ ತೃತೀಯ ಸ್ಥಾನ ಪಡೆದುಕೊಂಡಿತು.

ADVERTISEMENT

4x400 ರಿಲೇ ವಿಭಾಗದಲ್ಲಿ ಡಿಎಆರ್ ಪ್ರಥಮ, ಕಾರ್ಕಳ ದ್ವಿತೀಯ, ಡಿಪಿಒ ತೃತೀಯ ಬಹುಮಾನ ಗೆದ್ದುಕೊಂಡಿತು. ಥ್ರೋಬಾಲ್ಮಹಿಳೆಯರ ಸ್ಪರ್ಧೆಯಲ್ಲಿ ಉಡುಪಿ ಮೊದಲ ಹಾಗೂ ಕುಂದಾಪುರ ಎರಡನೇ ಸ್ಥಾನ ಪಡೆಯಿತು.

ಪ್ರೆಸ್‌ ಇಲೆವೆನ್ ಹಾಗೂ ಎಸ್‌ಪಿ ಇಲೆವೆನ್ ನಡುವೆ ನಡೆದ ಕ್ರಿಕೆಟ್‌ ಪಂದ್ಯದಲ್ಲಿ ಎಸ್‌ಪಿ ಇಲೆವೆನ್ ಗೆಲುವು ಸಾಧಿಸಿ ಮೊದಲ ಬಹುಮಾನ ಪಡೆದರೆ, ಪ್ರೆಸ್‌ ಇಲೆವೆನ್‌ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಎಸ್‌ಪಿ ಹಾಗೂ ಎಎಸ್‌ಪಿ ನಡುವಿನ ಶಾಟ್‌ಪಟ್ ಸ್ಪರ್ಧೆಯಲ್ಲಿ ಎಸ್‌ಪಿ ವಿಷ್ಣುವರ್ಧನ್‌ ಪ್ರಥಮ, ಎಎಸ್‌ಪಿ ಕುಮಾರಚಂದ್ರ ದ್ವಿತೀಯ ಸ್ಥಾನ ಪಡೆದರೆ, ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಎಎಸ್‌ಪಿ ಕುಮಾರಚಂದ್ರ ಪ್ರಥಮ, ಎಸ್‌ಪಿ ವಿಷ್ಣುವರ್ಧನ್ ದ್ವಿತೀಯ ಸ್ಥಾನ, ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ವಿಷ್ಣುವರ್ಧನ್‌ ಪ್ರಥಮ, ಕುಮಾರಚಂದ್ರ ದ್ವಿತೀಯ ಬಹುಮಾನ ಗೆದ್ದುಕೊಂಡರು.

ಸಮಾರೋಪ ಸಮಾರಂಭದಲ್ಲಿಉಡುಪಿ ಜಿಎಸ್‌ಟಿ ವಿಭಾಗದ ಸಹಾಯಕ ಆಯಕ್ತರಾದ ಡಾ.ನಿಮಿಷಾಂಭ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಜಿಲ್ಲಾಧಿಕಾರಿ ಕೂರ್ಮಾರಾವ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವೈ.ನವೀನ್‌ಭಟ್‌, ಎಸ್‌ಪಿ ವಿಷ್ಣುವರ್ಧನ್‌, ಎಎಸ್‌ಪಿ ಕುಮಾರಚಂದ್ರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.